
ಪಬ್ಲಿಕ್ ರೈಡ್ ನ್ಯೂಸ್ ಪೀಣ್ಯ ದಾಸರಹಳ್ಳಿ : ವಿಧಾನಸಭಾ ಕ್ಷೇತ್ರದ ಪೀಣ್ಯ ಕೈಗಾರಿಕಾ ಪ್ರದೇಶ ವಾರ್ಡಿನ ಲಗ್ಗೆರೆ ಫ್ರೆಂಡ್ಸ್ ಸರ್ಕಲ್ ನ ಆಸರೆ ಫೌಂಡೇಶನ್ ವೃದ್ಧಾಶ್ರಮದಲ್ಲಿ ಸಂಸ್ಥಾಪಕ ಜಯರಾಜ್ ನಾಯ್ಡು ಅವರ 53ನೇ ಹುಟ್ಟುಹಬ್ಬ ಸರಳವಾಗಿ ಆಚರಿಸಿಕೊಂಡರು. ಕಳೆದ 20 ವರ್ಷದಿಂದ ಲಗ್ಗೆರೆಯಲ್ಲಿ ಒಂದೇ ಒಂದು ಆಶ್ರಮ ಮಾಡಿ ಇದೀಗ ಏಳು ಕಡೆ ವೃದ್ಧಾಶ್ರಮ ಮಾಡಿ ಸಾವಿರಾರು ತಂದೆ ತಾಯಂದಿರ ಸೇವೆ ಸಲ್ಲಿಸುವ ಭಾಗ್ಯ ಇವರಿಗೆ ಸಂದಿದೆ.
ಇದೇ ವೇಳೆ ಪತ್ನಿ ಶ್ರೀಮತಿ ಮಂಜುಳಾ ಜಯರಾಜ್ ನಾಯ್ಡು ಹಾಗೂ ಮಗಳು ಇನ್ನಿತರ ಅಭಿಮಾನಿಗಳಾದ ಜನಸ್ನೇಹಿ ವೃದ್ಧಾಶ್ರಮದ ಯೋಗೇಶ್ , ಆಗಮಿಸಿ ದಾಸರಹಳ್ಳಿಯ ಸ್ಪಿನ್ ಸಲೂನ್ ಮಾಲೀಕ ಸ್ಪಿನ್ ಚಂದ್ರು, ಸಂಜಯ್ , ಮಂಜುನಾಥ್ , ಇತರ ಅಭಿಮಾನಿಗಳು ಜಯರಾಜ್ ನಾಯ್ಡು ಅವರಿಗೆ ಶಾಲು ಹೊ ಧಿಸಿ ಪೇಟ ಧರಿಸಿ ಹಾರ ಹಾಕಿ ಸಿಹಿ ತಿನ್ನಿಸಿ ಶುಭಾಶಯ ಕೋರಿದರು . ಇದೇ ಸಂದರ್ಭದಲ್ಲಿ ಯಶು, ವಿಶ್ವನಾಥ್, ಅಮರ್, ಶಿವಕುಮಾರ್ ಇತರ ಅಭಿಮಾನಿಗಳು ಆಶ್ರಮದ ತಂದೆ ತಾಯಿಯಂದಿರು ಉಪಸ್ಥಿತರಿದ್ದರು.