July 4, 2025

ಬೆಳಗಾವಿ ಕಣಗಲಾ: ಪ್ರತಿ ವರ್ಷ ಜುಲೈ 1 ರಂದು ರಾಷ್ಟ್ರೀಯ ವೈದ್ಯರ ದಿನವನ್ನು ಆಚರಣೆ ಮಾಡಲಾಗುತ್ತದೆ. ಮನುಷ್ಯನಿಗೆ ಆರೋಗ್ಯವೇ ಭಾಗ್ಯ ಎಂಬುದು ಸರ್ವಕಾಲಿಕ ಮಾತು. ಇದು ಅಷ್ಟೇ ಸತ್ಯವೂ ಕೂಡ. ಆರೋಗ್ಯವನ್ನು ರಕ್ಷಿಸುವುದು, ಅನಾರೋಗ್ಯಕ್ಕೆ ಮದ್ದು ನೀಡಿ, ಗುಣ ಪಡಿಸುವುದು ವೈದ್ಯರ ಕರ್ತವ್ಯವಾಗಿದೆ. ವೈದ್ಯೋ ನಾರಾಯಾಣ ಹರಿ ಎನ್ನುವುದು ಅದಕ್ಕೆ ಸಾಕ್ಷಿಯಾಗಿದೆ. ಅದಕ್ಕಾಗಿ ವೈದ್ಯರನ್ನ ದೇವರಿಗೆ ಹೊಲಿಸಲಾಗುತ್ತದೆ. ಈ ಪದ್ಧತಿಯೂ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿದೆ.

ಅನಾರೋಗ್ಯಕ್ಕೆ ತುತ್ತಾದ ಪ್ರತಿಯೋಬ್ಬ ರೋಗಿಯನ್ನು ಸರಿಯಾದ ಚಿಕಿತ್ಸೆ ನೀಡುವ ಮೂಲಕ ಗುಣಪಡಿಸಿ, ಅವನಿಗೆ ಪುನರ್ಜನ್ಮ ನೀಡುವುದು ಪ್ರತಿಯೊಬ್ಬ ವೈದ್ಯರ ಕಾಯಕವಾದರೆ. ಅವರಿಗೆ ಗೌರವ ಸಲ್ಲಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಇಂತಹ ಪುನರ್ಜನ್ಮ ನೀಡುವ ವೈದ್ಯರಿಗೆ ವಿಶೇಷ ಗೌರವ ನೀಡುವ ಸಲುವಾಗಿ ಪ್ರತಿ ವರ್ಷ ಜುಲೈ 1 ರಂದು ರಾಷ್ಟ್ರೀಯ ವೈದ್ಯರ ದಿನವನ್ನ ಆಚರಿಸಲಾಗುತ್ತದೆ.

ಈ ನಿಮಿತ್ಯ ಇಂದು ದಿನಾಂಕ :01-07-2025 ರಂದು ಕಣಗಲಾದ ಸೇವಾ ಕ್ಲಿನಿಕ ನಲ್ಲಿ ಡಾ: ಬಿ.ಆರ್.ಸುತಾರ ಕುಟುಂಬದಲ್ಲಿ ಅವರ ಮಗನಾದ ಡಾ:ರೋಹಿತ ಸುತಾರ ಹಾಗೂ ಸೌ. ಸ್ನೇಹಾ ರೋಹಿತ ಸುತಾರ ಹಾರ ಮತ್ತು ಶಾಲು ಹಾಕಿ ಸನ್ಮಾನ ಮಾಡಿ ಅವರಿಗೆ ಗೌರವವಂದನೆ ನೀಡಲಾಯಿತು.

ಸದರಿ ಕಾರ್ಯಕ್ರಮದಲ್ಲಿ ಹಿರಿಯರಾದ ಶ್ರೀ ಮಹಾದೇವ ರೆಂಗಟೆ, ಶಂಕರ ಶಿಂದೆ, ಪದ್ಮರಾಜ ಕಮತೆ,ಅವಿನಾಶ ಕುಲಕರ್ಣಿ, ಅಮಿತ ಸುತಾರ ಹಾಗೂ ಪತ್ರಕರ್ತರಾದಂತಹ ಸಂತೋಷ ನಿರ್ಮಲೆ ಮತ್ತಿತ್ತರರು ಹಾಜರಿದ್ದರು.

ವರದಿಗಾರರು : ಸಂತೋಷ ನಿರ್ಮಲೆ . ಪಬ್ಲಿಕ ರೈಡ್

Leave a Reply

Your email address will not be published. Required fields are marked *

error: Content is protected !!