ಹುಕ್ಕೇರಿ: ಕಣಗಲಾ ಗ್ರಾಮದ ಸರಕಾರಿ ಆಸ್ಪತ್ರೆಯಲ್ಲಿ 26 ಜನವರಿ ರಂದು 77 ನೇ ಭಾರತ ದೇಶದ ಗಣರಾಜ್ಯೋತ್ಸವ ದಿನಾಚರಣೆಯನ್ನು ಅತ್ಯಂತ ಅದ್ಧೂರಿಯಾಗಿ ಆಚರಣೆ ಮಾಡಲಾಯಿತು. ಮೊದಲಿಗೆ ರಾಷ್ಟ್ರಪಿತ ಮಹಾತ್ಮಾ ಗಾಂಧಿಜಿ ಹಾಗೂ ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ ಅಂಬೇಡ್ಕರ ಅವರ ಪ್ರತಿಮೆಗೆ ಪೂಜೆ ಸಲ್ಲಿಸಲಾಯಿತು.
ಆಸ್ಪತ್ರೆಯ ವೈದ್ಯಾಧಿಕಾರಿಗಳಾದಂತಹ ಡಾ. ಶ್ರೀ ಸಚಿನ ಶರ್ಮಾ ಇವರು ಧ್ವಜಾರೋಹಣವನ್ನು ನೇರವೆರಿಸಿ, ಭಾರತದ ಸಂವಿಧಾನ ಇಡಿ ವಿಶ್ವದಲ್ಲೆ ದೊಡ್ಡ ಸಂವಿಧಾನ ಹಾಗೂ ಈ ಸಂವಿಧಾನವು ನಮಗೆ ರಾಷ್ಟ್ರದ ಬಗ್ಗೆ ಹೆಮ್ಮೆ ತರಿಸುತ್ತದೆ ಎಂದು ಹೇಳಿ ಎಲ್ಲರೀಗೂ ಗಣರಾಜ್ಯೋತ್ಸವದ ಶುಭಾಶಯಗಳನ್ನು ಹೇಳಿದರು.
ಈ ಸಂದರ್ಭದಲ್ಲಿ ಆಸ್ಪತ್ರೆಯ ಸಿಬ್ಬಂದಿಗಳು ಹಾಗೂ ಆಶಾ ಕಾರ್ಯಕರ್ತೆಯರು ಹಾಜರಿದ್ದರು ನಂತರ ಎಲ್ಲರಿಗೂ ಸಿಹಿ ಹಂಚಿ ಅತ್ಯಂತ ಸಂತೋಷ ಮತ್ತು ಸಂಭ್ರಮದಿಂದ ಗಣರಾಜ್ಯೋತ್ಸವ ದಿನಾಚರಣೆ ಮಾಡಲಾಯಿತು
ಸಂತೋಷ ನಿರ್ಮಲೆ,
ಪಬ್ಲಿಕ ರೈಡ್ ನ್ಯೂಸ, ಕಣಗಲಾ
