ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಕಣಗಲಾ ಗ್ರಾಮ ಪಂಚಾಯತಿಯಿಂದ ಸನ್ 2019-2020ನೇ ಸಾಲಿನಲ್ಲಿ 14ನೇ ಹಣಕಾಸು ಯೋಜನೆಯಡಿಯಲ್ಲಿ ಬಿಡುಗಡೆಯಾದ ರೂ 1.50,000/, ಹಾಗೂ ಇನ್ನಿತರ ದೇಣಿಗೆದಾರರಿಂದ ದೇಣಿಗೆಯನ್ನು ಸಂಗ್ರಹಿಸಿ ಒಟ್ಟು ರೂ.4.50,000/- ಪಾವತಿಸಿ ಡಾ.ಬಿ.ಆರ್.ಅಂಬೇಡ್ಕರ ಅವರ ಕಂಚಿನ ಮೂರ್ತಿಯನ್ನು ಕ್ರಮಬದ್ಧವಾಗಿ ಕೋಟೆಶನ್ ಕರೆದು ಗುತ್ತಿಗೆದಾರರಾದ ವೈಷ್ಣವಿ ಎಂಟರ್‌ಪ್ರೈಸಸ್‌ನ ರಾಜು ಐಹೊಳೆ ಅವರ ಮುಖಾಂತರ ಡೊಂಗರಸಾನೆ ಆಟ್ಸ್, ಕೊಲ್ಲಾಪೂರ ಇವರಿಂದ ನಿರ್ಮಿಸಿ ತರಲಾಗಿದೆ. ಈ ಅವಧಿಯಲ್ಲಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾಗಿ ಶ್ರೀ.ಎಸ್ ದಯಾನಂದ ನಾಯಿಕ ಹಾಗೂ ಗಾ. ಪಂ. ಅಧ್ಯಕ್ಷರಾಗಿ ಸೌ.ವನಿತಾ ಸ. ನಾಯಿಕ ಇವರು ಕಾರ್ಯನಿರ್ವಹಿಸುತ್ತಿದ್ದರು ಸದರಿ ಕಂಚಿನ ಮೂರ್ತಿಯು 3. 1/2 ಫೂಟ್ ಎತ್ತರ ಹಾಗೂ 70. ಕಿ. ಗ್ರಾ ತೂಕವಿರುತ್ತದೆ.
ಸದರಿ ಡಾ.ಬಿ.ಆರ್.ಅಂಬೇಡ್ಕರ ಅವರ ಕಂಚಿನ ಮೂರ್ತಿಯನ್ನು ಅಂಬೇಡ್ಕರ ವೃತ್ತ, ಕಣಗಲಾದಲ್ಲಿ ಸ್ಥಾಪಿಸಬೇಕಾಗಿದ್ದು, ಪ್ರಸ್ತುತ ವೃತ್ತದ ಪಕ್ಕದಲ್ಲಿ ರಾಷ್ಟ್ರೀಯ ಹೆದ್ದಾರಿ ಮಾರ್ಗದ ರಸ್ತೆ ಅಗಲೀಕರಣ ಕಾಮಗಾರಿ ನಡೆಯುತ್ತಿರುವುದರಿಂದ ಕಂಚಿನ ಮೂರ್ತಿಯನ್ನು ಅಲ್ಲಿಯವರೆಗೆ ಸುರಕ್ಷತೆಯ ದೃಷ್ಟಿಯಿಂದ ಕಣಗಲಾ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ದಿನಾಂಕ 23 ಜನವರಿ 2026 ರಂದು ಇಡಲು ಸಮಾಜದ ಮುಖಂಡರು ಹಾಗೂ ಗ್ರಾಮಸ್ಥರು ನಿರ್ಧರಿಸಿರುತ್ತಾರೆ.
ಈ ಕಂಚಿನ ಮೂರ್ತಿಯನ್ನು ಗ್ರಾಮ ಪಂ.ಅಭಿವೃದ್ಧಿ ಅಧಿಕಾರಿಗಳು, ಗ್ರಾ.ಪಂ.ಕಾರ್ಯದರ್ಶಿ ಶ್ರೀ.ಪ್ರದೀಪ ಹಂಜಿ, ಮತ್ತು ಬಿಲ್ ಕಲೆಕ್ಟರ್ ವಿಠಲ ನಾಯಿಕ ಹಾಗೂ ಕಣಗಲಾ ಗ್ರಾಮ ಪಂಚಾಯತಿಯ ಸಿಬ್ಬಂದಿಗಳ ಸಮ್ಮುಖದಲ್ಲಿ ಸುಪುರ್ದಿಯನ್ನು ಮಾಡಲಾಯಿತು. ಈ ಸಂಧರ್ಭದಲ್ಲಿ ದಲಿತ ಸಂಘರ್ಷ ಸಮಿತಿಯ ಅಧ್ಯಕ್ಷರಾದ ಹಾಗೂ ಗ್ರಾಮ ಪಂಚಾಯತಿ ಸದಸ್ಯರಾದ ಶ್ರೀ ಆಕಾಶ ಕೇರಿಮನಿ, ಗುತ್ತಿಗೆದಾರರಾದ ರಾಜು ಐಹೊಳೆ, ಸದಸ್ಯರಾದ ರವಿ ಮಾಳಗೆ, ಸೋಮನಾಥ ನಾಯಿಕ, ರಾಹುಲ ಖರಾಡೆ, ದತ್ತಾ ಠಾಣೆ, ಅರವಿಂದ ಬುವಾಚಾರಿ, ಗ್ರಾಮಸ್ಥರಾದ ಮಲಿಕ್ ಮುಲ್ಲಾ, ನಿಖಿಲ ಹವಾಲ್ದಾರ, ಸೂರಜ ಮುತ್ನಾಳೆ, ಮಲ್ಲೇಶ ಕಿವಂಡೆ, ಮಹಾಂತೇಶ ಖಾಡೆ, ಶಿವಾಜಿ ಜಾಧವ, ದತ್ತಾ ಪಾಟೀಲ ಉಪಸ್ಥಿತರಿದ್ದರು.
ವರದಿಗಾರರು : ಸಂತೋಷ ನಿರ್ಮಲೆ, ಪಬ್ಲಿಕ್ ರೈಡ್ ನ್ಯೂಸ್, ಕಣಗಲಾ
