ಹುಕ್ಕೇರಿ: ಸಂಕೇಶ್ವರ ಪಟ್ಟಣದ ಪೋಲಿಸ ಠಾಣೆಯಲ್ಲಿ 26 ಜನವರಿ ರಂದು 77 ನೇ ಭಾರತ ದೇಶದ ಗಣರಾಜ್ಯೋತ್ಸವ ದಿನಾಚರಣೆಯನ್ನು ಅತ್ಯಂತ ಅದ್ಧೂರಿಯಾಗಿ ಆಚರಣೆ ಮಾಡಲಾಯಿತು. ಮೊದಲಿಗೆ ರಾಷ್ಟ್ರಪಿತ ಮಹಾತ್ಮಾ ಗಾಂಧಿಜಿ ಹಾಗೂ ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ ಅಂಬೇಡ್ಕರ ಅವರ ಪ್ರತಿಮೆಗೆ ಪೂಜೆ ಸಲ್ಲಿಸಲಾಯಿತು.
ತದನಂತರ ಠಾಣೆಯ ಸಿಪಿಆಯ್ ಸಾಹೇಬರು ಆದಂತಹ ಶ್ರೀ ಶಿವಶರಣ ಆವಜಿ ಇವರು ಧ್ವಜಾರೋಹಣವನ್ನು ನೇರವೇರಿಸಿದರು. ಈ ಸಂದರ್ಭದಲ್ಲಿ ಠಾಣೆಯ ಪಿಎಸ್ಆಯ್, ಹವಲ್ದಾರ, ಪೋಲಿಸ ಕಾನ್ಸಟೇಬಲ ಹಾಗೂ ಎಲ್ಲ ಪೋಲಿಸ ಸಿಬ್ಬಂದಿಗಳು ಹಾಜರಿದ್ದರು.
ಸುಭದ್ರ ರಾಷ್ಟ್ರ ನಿರ್ಮಾಣ ಹಾಗೂ ಉತ್ತಮ ಆಡಳಿತಕ್ಕಾಗಿ ಭಾರತದ ಸಂವೀಧಾನವು ದೇಶ ವಿದೇಶಗಳಲ್ಲಿ ಮೆಚ್ಚುಗೆ ಪಡೆದಿದೆ ಎಂದು ಮಾನ್ಯ ಸಿಪಿಆಯ್ ಸಾಹೇಬರು ಹೇಳಿದರು. ಧ್ವಜಾರೋಹಣ ನೇರವೆರಿದ ನಂತರ ಎಲ್ಲರಿಗೂ ಸಿಹಿ ಹಂಚಿ ಅತ್ಯಂತ ಸಂತೋಷ ಮತ್ತು ಸಂಭ್ರಮದಿಂದ ಗಣರಾಜ್ಯೋತ್ಸವ ದಿನಾಚರಣೆ ಮಾಡಲಾಯಿತು
ಸಂತೋಷ ನಿರ್ಮಲೆ,
(ಪಬ್ಲಿಕ ರೈಡ್ ನ್ಯೂಸ, ಕಣಗಲಾ)
