
ಹುಬ್ಬಳ್ಳಿ
ಹುಬ್ಬಳ್ಳಿಯ ಮಹಾನಗರ ಪಾಲಿಕೆಯ ವಲಯ ಕಚೇರಿ 11 ರಲ್ಲಿ ಪ್ರಾಪರ್ಟಿಗೆ ಸಂಬಂಧಪಟ್ಟ ಹಾಗೆ ಮಾನ್ಯ ನ್ಯಾಯಾಲಯದಿಂದ ಯಥಾಸ್ಥಿತಿ ಕಾಪಾಡಬೆಕು ಎಂದು ಆದೇಶ ವಿದ್ದರೂ ಸಹಿತ ಖಾತಾ ಬದಲಾವಣೆ ಮಾಡಿದಂತಹ ಘಟನೆ ನಡೆದಿದೆ.
ವಿಶೇಷವೇನೆಂದರೆ ಹುಬ್ಬಳ್ಳಿಯ ಮಹಾನಗರ ಪಾಲಿಕೆಯ ವಲಯ ಕಚೇರಿ ನಂಬರ್ 11 ರಲ್ಲಿ ನೀಡಿದಂತಹ ತಕರಾರು ಅರ್ಜಿ ಹಾಗೂ ನ್ಯಾಯಾಲಯದ ಆದೇಶ ಮಾಯವಾಗಿದೆ ಅಂತ ಕರ ವಸೂಲಿಗಾರ ಬಿ. ಮಂಜುನಾಥ ಹೇಳಿದ್ದಾರಂತೆ.
ಪಾಲಿಕೆಯ ಕಾನೂನು ಸಲಹೆಗಾರರಾದಂತಹ ಹಿರೇಮಠ ಅವರು ತಾವೇ ಖುದ್ದಾಗಿ “54/814 ಮತ್ತು 54/815 ರ ಆಸ್ತಿಗೆ ಸಂಬಂಧಿಸಿದಂತೆ ಮಾನ್ಯ ನ್ಯಾಯಾಲಯದಿಂದ ಯಥಾಸ್ಥಿತಿ ಕಾಪಾಡಿಕೊಂಡು ಹೋಗಬೇಕು ಅಂತ ಆದೇಶ ಇದೆ ಆದುದರಿಂದ ಈ ಆಸ್ತಿ ಸಂಬಂಧ ಪಟ್ಟ ಹಾಗೆ ಯಾವುದೇ ಬದಲಾವಣೆ ಮಾಡಬೇಡಿ” ಅಂತ ಕೇಸ್ ಪೇಪರ್ ನಲ್ಲಿ ಬರೆದು ಪಾಲಿಕೆಯ ವಲಯ ಕಛೇರಿಯಲ್ಲಿ ಸಂಖ್ಯೆ 11ರ ಸಹಾಯಕ ಆಯುಕ್ತರಿಗೆ ಫೋನ್ ಕರೆ ಮುಖಾಂತರ ಸೂಚಿಸಿರುತ್ತಾರೆ. ಆದರು ಸಹ ಕಾನೂನು ಮೀರಿ ಕರ ಪತ್ರದಲ್ಲಿ ಬದಲಾವಣೆ ಮಾಡಿದ ಅಧಿಕಾರಿಗಳ ವಿರುದ್ಧ ಕ್ರಮ ಯಾವಾಗ ಅಂತ ಸಾರ್ವಜನಿಕರ ಪ್ರಶ್ನೆ ಆಗಿದೆ.
ಮಾನ್ಯ ನ್ಯಾಯಾಲಯದ ಆದೇಶ ಉಲ್ಲಂಘನೆ ಮಾಡಿ ನ್ಯಾಯಾಲಯದ ಆದೇಶವನ್ನೆ ಗಾಳಿಗೆ ತೂರಿದ ಅಧಿಕಾರಿಗಳ ಮೇಲೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಆಯುಕ್ತರು ಯಾವ ರೀತಿ ಕ್ರಮ ಕೈಗೊಳ್ಳುತ್ತಾರೆ ಎಂದು ಕಾದು ಕುಳಿತಿರುವ ತಕರಾರು ಅರ್ಜಿದಾರರು ನ್ಯಾಯ ಒದಗಿಸುವ ನ್ಯಾಯಾಲಯಕ್ಕೆ ಕಿಮ್ಮತ್ತು ನೀಡಿದ ಪಾಲಿಕೆಯ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ.
ಸಾರ್ವಜನಿಕರಿಗೆ ಸುಳ್ಳು ಮಾಹಿತಿ ನೀಡಿ ದಾರಿ ತಪ್ಪಿಸುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮ ಆಗಬೇಕು, ನ್ಯಾಯಾಲಯದ ಆದೇಶ ಉಲ್ಲಂಘನೆ ಮಾಡಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿದ್ದರೆ ಪಾಲಿಕೆಯ ವಿರುದ್ಧ ಉಗ್ರ ಹೋರಾಟ ಮಾಡಲಾಗುವುದು ಎಂದು ದಲಿತ ಕಲ್ಯಾಣ ಸೇವಾ ಸಮಿತಿ ಸಂಘಟನೆ ಪಬ್ಲಿಕ್ ರೈಡ್ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ.
ಪ್ರಾಮಾಣಿಕ ಹಾಗೂ ದಕ್ಷ ಅಧಿಕಾರಿಗಳು ಆದಂತಹ ಮಾನ್ಯ ಮಹಾನಗರ ಪಾಲಿಕೆಯ ಆಯುಕ್ತ ರುದ್ರೇಶ ಘಾಳಿ ಇಂತಹ ಘಟನೆಗಳ ಬಗ್ಗೆ ಯಾವ ರೀತಿ ಕ್ರಮ ತೆಗೆದುಕೊಳ್ಳುತ್ತಾರೆಂದು ಕಾದು ನೋಡಬೇಕಾಗಿದೆ.
ಪಬ್ಲಿಕ್ ರೈಡ್ ವರದಿ ಹುಬ್ಬಳ್ಳಿ