ಪಬ್ಲಿಕ್ ರೈಡ್ ನ್ಯೂಸ್ : ಪೀಣ್ಯದಾಸರಹಳ್ಳಿ ಸಮೀಪದ ಚಿಕ್ಕಬಾಣಾವರದ ಕೃಷ್ಣ ನಗರ ಮುಖ್ಯ ರಸ್ತೆ ಡಾಂಬರೀಕರಣಕ್ಕೆ ಶಾಸಕ ಎಸ್. ಮುನಿರಾಜು ಚಾಲನೆ ನೀಡಿದರು. ಇದೇ ವೇಳೆ ಕೆರೆ ಗುಡ್ಡದಹಳ್ಳಿಯ ಗ್ರೀನ್ ಮೆಡೋಸ್ ಬಡಾವಣೆ, ಎಂ.ಎಚ್. ಬಡಾವಣೆಗಳಲ್ಲಿ ಕೊಳವೆ ಬಾವಿ ಕೊರೆಯಲು ಚಾಲನೆ ನೀಡಲಾಯಿತು. ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಜಿ. ಮರಿಸ್ವಾಮಿ, ಬಿಜೆಪಿ ಮುಖಂಡರಾದ ಬಿ.ಎಂ. ಚಿಕ್ಕಣ್ಣ, ನವೀನ್, ಶ್ರೀನಿವಾಸ ಮೂರ್ತಿ, ಪುರಸಭೆ ಮುಖ್ಯ ಅಧಿಕಾರಿ ಸಂದೀಪ್, ಸಹಾಯಕ ಎಂಜಿನಿಯರ್ ಗಳಾದ ಸುಮತಿ, ಸುಮಾ ಹಾಗೂ ಸ್ಥಳೀಯರು ಇದ್ದರು.
