ಕಲಘಟಗಿ
ಹುಬ್ಬಳ್ಳಿ ಕಲಘಟಗಿ ಮುಖ್ಯ ರಸ್ತೆಯಲ್ಲಿ ಭಾರವಾದ ಕಬ್ಬಿಣದ ವಸ್ತುಗಳನ್ನು ಹೊತ್ತಿಕೊಂಡು ಹೋಗುತ್ತಿದ್ದ ಟ್ರಕ್ ಏಕಾಏಕಿ ರಸ್ತೆಯ ಮಧ್ಯದಲ್ಲಿಯೇ ಉರುಳಿ ಬಿದ್ದಿದೆ.

ಘಟನೆಯು ಕಲಘಟಗಿ ಸಮೀಪದಲ್ಲಿ ನಡೆದಿದೆ ಎಂದು ತಿಳಿದು ಬಂದಿದೆ. ಲಾರಿ ಉರುಳಿ ಬಿದ್ದ ಪರಿಣಾಮ ಹುಬ್ಬಳ್ಳಿ ಕಲಘಟಗಿ ರಸ್ತೆಯಲ್ಲಿ ಸಂಚಾರ ದಟ್ಟಣೆ ಸಮಸ್ಯೆ ಉಂಟಾಗಿದೆ.

