ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಕಣಗಲಾ ಗ್ರಾಮದಲ್ಲಿ 891 ನೇ ಶ್ರೀ ಹಡಪದ ಅಪ್ಪಣ್ಣ ಜಯಂತಿಯನ್ನು ಅತ್ಯಂತ ಅದ್ಧೂರಿಯಾಗಿ ಆಚರಣೆ ಮಾಡಲಾಯಿತು.
ಇಲ್ಲಿನ ಶ್ರೀ ಕಲ್ಮೇಶ್ವರ ಮಂದಿರದಲ್ಲಿ ಮೊದಲಿಗೆ ಶ್ರೀ ಹಡಪದ ಅಪ್ಪಣ್ಣ ಅವರ ಭಾವಚಿತ್ರದ ಪೂಜನವನ್ನು ಶ್ರೀ ಜಗದ್ಗುರು ಸಿದ್ಧಬಸವದೇವರು ಹುಣಸೆಕೊಳ್ಳಮಠ, ಯಮಕಣಮರಡಿ ಇವರ ಶುಭ ಹಸ್ತದಿಂದ ಮಾಡಲಾಯಿತು.
ಸದರಿ ಕಾರ್ಯಕ್ರಮದಲ್ಲಿ ಶ್ರೀಗಳ ಆಶಿರ್ವಚನ ಕೇಳಲು ಗ್ರಾಮದ ಎಲ್ಲ ಭಾವಿಕರು ಬಂದಿದ್ದರು ಕಾರ್ಯಕ್ರಮ ಮುಗಿದ ಮೇಲೆ ಜಯಂತಿಯ ನಿಮಿತ್ಯವಾಗಿ ಮಹಾಪ್ರಸಾದದ ವ್ಯವಸ್ಥೆಯನ್ನು ಮಾಡಲಾಗಿತ್ತು.ಇದನ್ನು ಪಡೆದು ಎಲ್ಲ ಭಾವಿಕರು ಪುನೀತರಾದರು. ಸದರಿ ಕಾರ್ಯಕ್ರಮದಲ್ಲಿ ಶ್ರೀ ಹಡಪದ ಅಪ್ಪಣ್ಣ ಸಮಾಜದ ಜಿಲ್ಲಾ ಉಪಾಧ್ಯಕ್ಷರಾದ ಶ್ರೀ ಸಂತೋಷ ನಾವಿ, ಶ್ರೀ ಹಡಪದ ಅಪ್ಪಣ್ಣ ಸಮಾಜ ಕಣಗಲಾದ ಅಧ್ಯಕ್ಷರಾದ ಶ್ರೀ ವಿಜಯ ಶಿಂಧೆ, ಶ್ರಿ ಶೇಖರ ಶಿಂಧೆ, ಮಹಾದೇವ ಶಿಂಧೆ, ಕುಮಾರ ಶಿಂಧೆ, ವಿಠ್ಠಲ ಶಿಂಧೆ , ಸುನೀಲ ಶಿಂಧೆ , ಗ್ರಾಮಸ್ಥರು ಹಾಗೂ ಪತ್ರಕರ್ತರು ಹಾಜರಿದ್ದರು
ಪಬ್ಲಿಕ ರೈಡ್ ನ್ಯೂಸ್ ಸಂತೋಷ ನಿರ್ಮಲೆ, ವರದಿಗಾರರು ಬೆಳಗಾವಿ
