ಪಬ್ಲಿಕ್ ರೈಡ್ ನ್ಯೂಸ್ ಪೀಣ್ಯ ದಾಸರಹಳ್ಳಿ: ಉಳ್ಳವರು ಹುಟ್ಟು ಹಬ್ಬಗಳಿಗೆ ದುಂದು ವೆಚ್ಚ,ಅದ್ದೂರಿತನ ಮಾಡುವ ಬದಲು ಬಡವರಿಗೆ ನೆರವು ನೀಡುವ ಮೂಲಕವಾದರೂ ಸೇವಾ ಮನೋಭಾವ ಬೆಳೆಸಿಬೇಕು’ ಎಂದು ಸೂರಜ್ ಫೌಂಡೇಶನ್ ಅಧ್ಯಕ್ಷೆ ಸುಜಾತ ಮುನಿರಾಜು ತಿಳಿಸಿದರು.
ಹಾವನೂರು ಬಡಾವಣೆಯಲ್ಲಿ ಭರತ್ ಸೌಂದರ್ಯ ಫೌಂಡೇಶನ್ ಅಧ್ಯಕ್ಷ ಭರತ್ ಸೌಂದರ್ಯ ಅವರು ಆಯೋಜಿಸಿದ್ದ ಬಡವರಿಗೆ ಸಹಾಯ ಹಸ್ತ ವಿತರಣೆ ಸಮಾರಂಭದಲ್ಲಿ ಮಾತನಾಡಿದರು.
ಬಡವರಿಗೆ ಸಹಾಯ ಹಸ್ತ ನೀಡುವುದು, ಬಡವರ ಏಳಿಗೆಗೆ ಶ್ರಮಿಸುವುದು ಮನುಷ್ಯನ ದೊಡ್ಡ ಗುಣ. ಅದು ಎಲ್ಲರಲ್ಲೂ ಬರುವುದಿಲ್ಲ ಈ ನಿಟ್ಟಿನಲ್ಲಿ ನೆರವು ನೀಡುವ ಮೂಲಕ ಭರತ್ ಸೌಂದರ್ಯ ಸಾರ್ಥಕತೆ ಮೆರೆದಿದ್ದಾರೆ’ ಎಂದು ಶ್ಲಾಘನೆ ಮಾಡಿದರು.
ಭರತ್ ಸೌಂದರ್ಯ ಮಾತನಾಡಿ,’ ಬಡ ವ್ಯಾಪಾರಿಗಳಿಗೆ ತಳ್ಳುವ ಗಾಡಿಗಳು, ಪೌರಕಾರ್ಮಿಕರಿಗೆ ಬಟ್ಟೆ ಮತ್ತು ಗೌರವಧನ, ಸವಿತಾ ಸಮಾಜದ ಸಮುದಾಯದವರಿಗೆ ಸಲಕರಣೆಗಳು, ಲೈನ್ ಮ್ಯಾನ್ ಗಳಿಗೆ ಬಟ್ಟೆ ಮತ್ತು ಗೌರವ ಧನ, ಆಟೋ ಚಾಲಕರಿಗೆ ಸಮವಸ್ತ್ರ ಮತ್ತು ಗೌರವಧನ ನೀಡುತ್ತಾ ನಮ್ಮ ಕೈಲಾದ ಸೇವೆ ಮಾಡುತ್ತಿದ್ದೇವೆ’ಎಂದು ತಿಳಿಸಿದರು.
ಸಮಾರಂಭದಲ್ಲಿ ಸ್ಥಳೀಯ ಮುಖಂಡರಾದ ರಮೇಶ್ ಸೌಂದರ್ಯ, ದೇವಿಕ ಮತ್ತು ಸಾವಿರಾರು ಜನರು ಭಾಗವಹಿಸಿದ್ದರು.
