
ಹುಬ್ಬಳ್ಳಿ: ಕ್ಷುಲಕ ಕಾರಣಕ್ಕೆ ಸಹೋದರರ ಮಧ್ಯೆ ಜಗಳ ನಡೆದು ಅಣ್ಣನಿಗೆ ತಮ್ಮ ಚಾಕು ಇರಿದು ಪರಾರಿಯಾದ ಘಟನೆ ಎಪಿಎಂಸಿ ಠಾಣಾ ವ್ಯಾಪ್ತಿಯಲ್ಲಿ ಇಂದು ನಡೆದಿದೆ.ಚಾಕುವಿನಿಂದ ಹಲ್ಲೆಗೊಳಗಾದ ಯುವಕ ತೋಪಿಕ್ ಇದ್ಲಿಕಾರ ಆಗಿದ್ದು ಚಾಕು ಹಾಕಿದ ಯುವಕ ಮುಸ್ತಾಕ್ ಇದ್ಲಿಕಾರ್ ಆಗಿದ್ದಾನೆ.
ಹೌದು
ನಂದೀಶ್ವರ ನಗರ ಬಡಾವಣೆಯಲ್ಲಿ ವಾಸವಿದ್ದ ಮುಸ್ತಾಕ್ ಮತ್ತು ತೊಪಿಕ್ ಇಬ್ಬರು ಅಣ್ಣತಮ್ಮಂದಿರು ಮುಂಜಾನೆ ಕ್ಷುಲ್ಲಕ ಕಾರಣಕ್ಕೇ ಇವರಿಬ್ಬರ ನಡುವೆ ಜಗಳ ಏರ್ಪಟ್ಟಿದು ಅತಿರೇಕಕ್ಕೆ ಹೋಗಿ ತಮ್ಮ ಮುಸ್ತಾಕ್ ತನ್ನ ಕೈಯಲ್ಲಿದ್ದ ಚಾಕುವಿನಿಂದ ಅಣ್ಣನ ಕುತ್ತಿಗೆಗೆ ಇರಿದು ಪರಾರಿಯಾಗಿದ್ದಾನೆ.
ಅಲ್ಲಿದ್ದ ಸ್ಥಳಿಯರು ರಕ್ತದ ಮಡುವಿನಲ್ಲಿ ಬಿದ್ದಿದ್ದ ತೋಪಿಕನನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು ಈ ಘಟನೆ ಕುರಿತು ಎಪಿಎಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.