
ಹುಬ್ಬಳ್ಳಿ : ಭಿಕ್ಷೆ ಬೇಡಿಕೊಂಡು ಬಾಡಿಗೆ ಮನೆಯೊಂದರಲ್ಲಿ ವಾಸ ಮಾಡುತ್ತಿದ್ದ ಬಿಹಾರ ಮೂಲದ ಭಿಕ್ಷುಕ ಕುಟುಂಬದಲ್ಲಿ ತಡ ರಾತ್ರಿ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಬಿಹಾರ ಮೂಲದ ವಿಶೇಷ ವಿಕಲಾಂಗ ಚೇತನ ಮಿತೇಶ ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ. ಇನ್ನೂ ಬಿಹಾರಿ ಮೂಲದ ರಾಜೇಶ್ ಕುಮಾರ್ ಅಲಿಯಾಸ್ ನಜೀರ್ ಖಾನ್ ಹತ್ಯೆ ಮಾಡಿದ ಆರೋಪಿ ಆಗಿಿದ್ದಾನೆ. ಇನ್ನೂ ಹತ್ಯೆಯಾದ ಚೇತನ ಮಿತೇಶ ಹಾಗೂ ಕೊಲೆ ಆರೋಪಿ ಸೇರಿ ತಾಯಿ ಒಂದೇ ಮನೆಯಲ್ಲಿ ವಾಸ ಮಾಡುತ್ತಿದ್ದರು. ಭಿಕ್ಷೆ ಬೇಡಿಕೊಂಡು ಜೀವನ ನಡೆಸುತ್ತಿದ್ದರು, ಆದರೆ ಕಳೆದ ಭಾನುವಾರ ತಡ ರಾತ್ರಿ ಮನೆಯಲ್ಲಿ ಚಿಕ್ಕ ಗಲಾಟೆ ಆರಂಭವಾಗಿದೆ.
ಈ ಗಲಾಟೆಯಲ್ಲಿ ಕೊಲೆ ಆರೋಪಿ ತಾಯಿಗೆ ಚೇತನ್ ಮಿತೇಶ ಬೈದಿದ್ದನಂತೆ. ಇದರಿಂದ ಕೋಪಗೊಂಡ ರಾಜೇಶ ಅಲಿಯಾಸ್ ನಜೀರ್ ಖಾನ ಹತ್ಯೆಯಾದ ಚೇತನ್ ಮೇಲೆ ಮೈಕ್ ಸೆಟ್‌ನಿಂದ ತಲೆ ಭಾಗಕ್ಕೆ ಹೊಡೆದಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದ ಗಾಯಾಳುವನ್ನು ಕೀಮ್ಸ್ ಆಸ್ಪತ್ರೆಗೆ ಸಾಗಿಸಲು ಮುಂದಾಗಿದ್ದ ವೇಳೆ ಮಾರ್ಗ ಮದ್ಯ ಚೇತನ ಮಿತೇಶ ವ್ಯಕ್ತಿ ಕೊನೆಯುಸಿರೆಳೆದಿದ್ದಾನೆ ಎಂದು ತಿಳಿದು ಬಂದಿದೆ. ಈ ಘಟನೆ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.