
ಪಬ್ಲಿಕ್ ರೈಡ್ ನ್ಯೂಸ್ ಪೀಣ್ಯ,ದಾಸರಹಳ್ಳಿ: ರಾಜ್ ಪ್ರಿಯಾ ಪ್ರೊಡಕ್ಷನ್” ಬ್ಯಾನರ್ ಅಡಿಯಲ್ಲಿ ಹೆಚ್.ಸೋಮಶೇಖರ್ ನಿರ್ಮಿಸುತ್ತಿರುವ “ಕಥೆ ಗೊತ್ತಿಲ್ಲ ಶೂಟಿಂಗ್ ಶುರು” ಚಿತ್ರದ ಮುಹೂರ್ತವು ಅನ್ನಪೂರ್ಣೇಶ್ವರಿ ನಗರದ ಶ್ರೀ ವೆಂಕಟೇಶ್ವರಸ್ವಾಮಿ ದೇವಸ್ಥಾನದಲ್ಲಿ ಅದ್ದೂರಿಯಾಗಿ ನೆರವೇರಿತು.
ರಥಾವರ ಸಿನಿಮಾದ ನಿರ್ಮಾಪಕರಾದ ಧರ್ಮಶ್ರೀ ಮಂಜುನಾಥ್ ರವರು ಆರಂಭ ಫಲಕವನ್ನು ತೋರಿದರು. ನಂತರ ಖ್ಯಾತ ನಟರಾದ ಸುಚೇಂದ್ರ ಪ್ರಸಾದ್ ರವರು ಕ್ಯಾಮರಾ ಚಾಲನೆ ಮಾಡಿದರು.
ಪಲ್ಲಕ್ಕಿ ಸಿನಿಮಾದ ಖ್ಯಾತ ನಿರ್ದೇಶಕರಾದ ಕೆ. ನರೇಂದ್ರಬಾಬು ರವರು ಕಥೆ-ಚಿತ್ರಕಥೆ ಬರೆಯುವುದರೊಂದಿಗೆ ಈ ಚಿತ್ರಕ್ಕೆ ಆಕ್ಷನ್-ಕಟ್ ಹೇಳುತ್ತಿದ್ದಾರೆ.
ಹುಲಿದುರ್ಗ ಮತ್ತು ರಾಘವೇಂದ್ರ ದಿ ವಾರಿಯರ್ ಸಿನಿಮಾಗಳ ನಿರ್ದೇಶಕರಾದ ಯಶೋಧರ. ಎನ್ ರವರು ಸಂಭಾಷಣೆ ಬರೆಯುವುದರ ಜೊತೆಗೆ ಸಹ ನಿರ್ದೇಶನದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ.
ಗಿರಿಧರ್ ದಿವಾನ್ ರವರ ಛಾಯಾಗ್ರಹಣ, ಕವಿರತ್ನ ಡಾ. ವಿ ನಾಗೇಂದ್ರ ಪ್ರಸಾದ್ ರವರ ಸಾಹಿತ್ಯ, ಗಿರೀಶ್ ಕುಮಾರ್ ರವರ ಸಂಕಲನ, ನಂದಕುಮಾರ್ ರವರ ನೃತ್ಯ ನಿರ್ದೇಶನ, ಥ್ರಿಲ್ಲರ್ ಮಂಜು ರವರ ಸಾಹಸ ಈ ಚಿತ್ರಕ್ಕೆ ಇದೆ.
ಮುಖ್ಯ ಭೂಮಿಕೆಯಲ್ಲಿ ಯುವ ಪ್ರತಿಭೆಗಳಾದ ಗೋವಿಂದ್ ಮಂಜುನಾಥ್ ಮತ್ತು ವಿನಯ್ ಸೂರ್ಯ ಇವರಿಬ್ಬರೂ ನಾಯಕ ಮತ್ತು ಖಳ ನಾಯಕರಾಗಿ ಪಾತ್ರ ನಿರ್ವಹಿಸುತ್ತಿದ್ದಾರೆ. ಪೋಷಕ ಪಾತ್ರದಲ್ಲಿ ಸುಚೇಂದ್ರ ಪ್ರಸಾದ್, ಮಳವಳ್ಳಿ ಸಾಯಿಕೃಷ್ಣ, ವಿ ಮನೋಹರ್, ಥ್ರಿಲ್ಲರ್ ಮಂಜು, ಸೋಮಶೇಖರ್, ಗಿರೀಶ್ ಜತ್ತಿ, ಮೂಗು ಸುರೇಶ್, ಗೋವಿಂದೇಗೌಡ, ಕಿರಣ್ ಸೋಮಶೇಖರ್ ಹಾಗೂ ಇನ್ನೂ ಮುಂತಾದವರು ಪೋಷಕ ಕಲಾವಿದರಾಗಿ ಪಾತ್ರಕ್ಕೆ ಜೀವ ತುಂಬಲಿದ್ದಾರೆ. ಚಿತ್ರದ ಶೂಟಿಂಗ್ ಭರದಿಂದ ಸಾಗಿದೆ.