April 19, 2025

ಪಬ್ಲಿಕ್ ರೈಡ್ ನ್ಯೂಸ್ ನೆಲಮಂಗಲ : ಇಂದು ನೆಲಮಂಗಲ ತಾಲ್ಲೂಕಿನ ಸರ್ಕಾರಿ ಶಿಕ್ಷಕರ ನೌಕರರ ಸಂಘದ ವತಿಯಿಂದ ಪ್ರತಿಭಾನ್ವಿತ ವಿದ್ಯಾರ್ಥಿನಿಯಾದ ಶಿಲ್ಪಶ್ರೀ.ವಿ ಎಂಬ ವಿದ್ಯಾರ್ಥಿನಿಯು ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲ್ಲೂಕಿನ ಹೊಯ್ಸಳ ಪಿ ಯು ಕಾಲೇಜಿನಲ್ಲಿ ಓದಿ ವಿಜ್ಞಾನ ವಿಷಯದಲ್ಲಿ 594 ಅಂಕಗಳನ್ನು ಪಡೆದು ಕರ್ನಾಟಕ ರಾಜ್ಯಕ್ಕೆ 5 ನೇ ಸ್ಥಾನ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ 1 ನೇ ಸ್ಥಾನ ಪಡೆದಿರುತ್ತಾರೆ.

ಈ ವಿದ್ಯಾರ್ಥಿನಿಯು ಚಿಕ್ಕ ವಯಸ್ಸನಲ್ಲೇ ತನ್ನ ತಂದೆಯನ್ನು ಕಳೆದುಕೊಂಡಿರುತ್ತಾರೆ. ತನ್ನ ತಾಯಿಯ ಪರಿಶ್ರಮದಿಂದ ಆಕೆಯು ತನ್ನ ವಿದ್ಯಾಭ್ಯಾಸವನ್ನು ಮುಂದುವರೆಸಿರುತ್ತಾರೆ ಹಾಗೂ ನೀಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಕೆ. ವೆಂಕಟರಮಣ ಗೌಡ ಮೆಡಿಕಲ್ ಕಾಲೇಜು, ದಕ್ಷಿಣ ಕನ್ನಡ. ಈ ಮೆಡಿಕಲ್ ಕಾಲೇಜಿನಲ್ಲಿ ಗೌರ್ನಮೆಂಟ್ ಮೆಡಿಕಲ್ ಸೀಟನ್ನು ಪಡೆದಿರುತ್ತಾರೆ. ಈ ವಿಷಯವನ್ನು ತಿಳಿದ ನೆಲಮಂಗಲ ತಾಲ್ಲೂಕಿನ ಸರ್ಕಾರಿ ಶಿಕ್ಷಕರ ಸಂಘದ ಎಲ್ಲಾ ಪದಾಧಿಕಾರಿಗಳು ಆಕೆಯ ಶೈಕ್ಷಣಿಕ ಪ್ರತಿಭೆಯನ್ನು ಗುರುತಿಸಿ ಹಾರ, ಮೊಮೆಂಟೊ ಕೊಟ್ಟು ಆಕೆಯನ್ನು ಅಭಿನಂದಿಸಿದರು.

ಈ ಸಂದರ್ಭದಲ್ಲಿ ಶಿಲ್ಪಶ್ರೀ ಅವರ ತಾಯಿಯಾದ ವೀಣಾ ರವರು ಮಗಳ ಸನ್ಮಾನವನ್ನು ನೋಡಿ ಖುಷಿಪಟ್ಟರು. ಮತ್ತು ಈ ಸಂದರ್ಭದಲ್ಲಿ ರಾಜ್ಯ ಸರ್ಕಾರಿ ಶಿಕ್ಷಕರ ನೌಕರರ ಸಂಘದ ಅಧ್ಯಕ್ಷರಾದ ವಾಸುದೇವ ಮೂರ್ತಿ ರವರು ವಿದ್ಯಾರ್ಥಿನಿಗೆ ಇದೇ ರೀತಿ ನಿನ್ನ ಮುಂದಿನ ವಿಧ್ಯಾಭ್ಯಾಸವು ಸುಗಮವಾಗಿರಲಿ ಹಾಗೂ ಉನ್ನತ ಶಿಕ್ಷಣವು ಮುಂದುವರಿಯಲಿ ಎಂದು ಹಾರೈಸಿದರು. ಮತ್ತು ವಿದ್ಯಾರ್ಥಿನಿಯ ಸೋದರ ಮಾವನವರಾದ ಎ ಗೋಪಾಲ್ ಶಿಕ್ಷಕರು ನಿನ್ನ ಮುಂದಿನ ಶೈಕ್ಷಣಿಕ ಜೀವನ ಹೀಗೆ ಮುಂದುವರಿದು ಪೂರ್ಣಗೊಳ್ಳಲಿ ಎಂದು ಹಾರೈಸಿದರು. ಹಾಗೂ ಪ್ರಾಥಮಿಕ ಶಾಲಾ ಶಿಕ್ಷಕರ ನೌಕರರ ಸಂಘದ ಅಧ್ಯಕ್ಷರಾದ ಪುಟ್ಟರುದ್ರರಾಧ್ಯ, ಯೋಗಾನಂದ, ಗಿರೀಶ್, ಚಂದ್ರು, ಗಂಗಮಲ್ಲಯ್ಯ, ಜಿ ಕೃಷ್ಣಮೂರ್ತಿ, ಸಿದ್ದಗಂಗಯ್ಯ, ಈ ರಾಮಕೃಷ್ಣಯ್ಯ, ಹನುಮಂತರಾಜು ಹಾಗೂ ಇನ್ನು ಹಲವರು ಈ ಸಂದರ್ಭದಲ್ಲಿ ಭಾಗಿಯಾಗಿದ್ದರು.

ವರದಿಗಾರರು ವಿಕಾಸ್ ಎಮ್ ಆರ್ ನೆಲಮಂಗಲ

Leave a Reply

Your email address will not be published. Required fields are marked *

error: Content is protected !!