April 19, 2025

ಪಬ್ಲಿಕ್ ರೈಡ್ ನ್ಯೂಸ್ ಪೀಣ್ಯ,ದಾಸರಹಳ್ಳಿ:ಸ್ಪಟಿಕಪುರಿ ಮಠದ ಮಹಾಸಂಸ್ಥಾನ ಪೀಠಾಧ್ಯಕ್ಷರಾದ ಶ್ರೀ ನಂಜಾವಧೂತ ಸ್ವಾಮೀಜಿಯವರು ಪೀಣ್ಯ 2ನೇ ಹಂತ ಸಮೀಪದ ಸಬ್-ರಿಜಿಸ್ಟ್ರಾರ್ ಕಛೇರಿ ಸಮೀಪದಲ್ಲಿರುವ ಶೇಂಗಾನಾಡು ಹಿತರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ತಿಮ್ಮರಾಜ್ ಗೌಡ್ರು ರವರ ‘ಅಧಿಪತಿ ಎಂಟರ್ ಪ್ರೈಸಸ್’ ಕಛೇರಿಗೆ ಭೇಟಿ ನೀಡಿ ಆಶೀರ್ವದಿಸಿದರು.

ಈ ವೇಳೆ ಮಾತನಾಡಿದ ಸ್ಪಟಿಕಪುರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ನಂಜಾವಧೂತ ಸ್ವಾಮೀಜಿ, ‘ಆಧ್ಯಾತ್ಮದ ಬಗ್ಗೆ ಜನರಿಗೆ ತಿಳಿಸಿಕೊಟ್ಟು ತಮಗೆ ಸಿಕ್ಕ ಅವಕಾಶಗಳನ್ನು ಬಳಸಿಕೊಂಡು ಜನರಿಗೆ ತಮ್ಮ ಕೈಲಾದಷ್ಟೂ ಸಹಾಯ ಮಾಡಿಕೊಂಡು ಬರುತ್ತಿರುವ ತಿಮ್ಮರಾಜ್ ಗೌಡ್ರು ರವರ ಸೇವೆ ಶ್ಲಾಘನೀಯ. ಅವರಿಗೆ ರಾಜಕೀಯದಲ್ಲಿ ಒಳ್ಳೆಯ ಅವಕಾಶಗಳು ಒದಗಿ ಬಂದು ಜನರ ಸೇವೆ ಮಾಡಲು ಆಶೀರ್ವಾದ ಸಿಗಬೇಕು’, ಎಂದು ಹೇಳಿದರು. ಕಛೇರಿಯವರು,

ವೇದಿಕೆಯ ರಾಜ್ಯಾಧ್ಯಕ್ಷರಾದ ತಿಮ್ಮರಾಜ್ ಗೌಡ್ರು ಮಾತನಾಡಿ, ‘ಶ್ರೀಗಳು ನಮ್ಮ ಕಛೇರಿಗೆ ಭೇಟಿ ನೀಡಿ ಆಶೀರ್ವದಿಸಿದ್ದು ನಮ್ಮ ಪುಣ್ಯ. ಜಗತ್ತಿಗೆ ಒಳಿತಿನ ಅವಶ್ಯಕತೆ ಇದ್ದಾಗ ನನ್ನ ಸೃಷ್ಟಿದೇವರ ಆದೇಶದಂತೆ ನಾನು ಲೋಕಕಲ್ಯಾಣಕ್ಕಾಗಿ ಹಲವಾರು ಕಾರ್ಯಗಳನ್ನು ನಡೆಸುತ್ತಾ ಬಂದಿದ್ದು ನಾನು ಮಾಡಿದ ಕೆಲವು ಕೆಲಸಗಳನ್ನು ಮಾತ್ರ ಸಾರ್ವಜನಿಕರ ಗಮನಕ್ಕೆ ತಂದಿದ್ದು, ಇನ್ನೂ ಕೆಲವನ್ನು ಹಾಗೆಯೇ ಲೋಕದ ಒಳಿತಿಗಾಗಿ ಹಾಗೂ ಜನರ ಕ್ಷೇಮಕ್ಕಾಗಿ ಮಾಡಿದ್ದು ನನಗೆ ಅದರಲ್ಲಿ ಅತ್ತ ತೃಪ್ತಿಯಿದೆ’, ಎಂದು ಹೇಳಿದರು.

ಇದೇ ವೇಳೆ ಅಕ್ಕಪಕ್ಕದ ಅಂಗಡಿಯ ಭಕ್ತಾದಿಗಳು, ಸಾರ್ವಜನಿಕರು ನಂಜಾವಧೂತ ಸ್ವಾಮೀಜಿಯವರ ಆಶೀರ್ವಾದ ಪಡೆದು ಪುನೀತರಾದರು. ಈ ಸಂದರ್ಭದಲ್ಲಿ ಜಯರಾಮ್ ಸೇರಿದಂತೆ ಹಲವಾರು ಮುಖಂಡರು, ಗಣ್ಯರು, ಶೇಂಗಾನಾಡು ಹಿತರಕ್ಷಣಾ ವರ್ಗದವರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

error: Content is protected !!