
ಪಬ್ಲಿಕ್ ರೈಡ್ ನ್ಯೂಸ್ ಪೀಣ್ಯ ದಾಸರಹಳ್ಳಿ:ಸೆಪ್ಟೆಂಬರ್ 19: ಕನ್ನಡ ಚಲನಚಿತ್ರ ರಂಗದ ಅಭಿನಯ ಭಾರ್ಗವ ಸಾಹಸ ಸಿಂಹ ಡಾ. ವಿಷ್ಣುವರ್ಧನ್ ರವರ ಜನ್ಮದಿನವನ್ನು ಹೆಗ್ಗನಹಳ್ಳಿ ಕ್ರಾಸಿನಲ್ಲಿ ಜಯಸಿಂಹ ಕನ್ನಡ ಯುವಕರ ವೇದಿಕೆ ವತಿಯಿಂದ ಹಮ್ಮಿಕೊಳ್ಳಲಾಗಿತ್ತು.
`ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಷ್ಣುವರ್ಧನ್ ರವರ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸಿದ ಪಾಲಿಕೆ ಮಾಜಿ ಸದಸ್ಯೆಯ ಪತಿ ಕೃಷ್ಣಯ್ಯ ಮಾತನಾಡಿ, ಈ ನಾಡು ಕಂಡ ಮೇರು ನಟರ ಪೈಕಿ ಡಾ. ವಿಷ್ಣುವರ್ಧನ್ ಕೂಡ ಒಬ್ಬರು ಉತ್ತಮ ನಟರಾಗಿ ಅನೇಕ ಚಲನಚಿತ್ರಗಳನ್ನು ಅಭಿನಯಿಸಿ ಇವರ ನಟನೆಯನ್ನು ಅನೇಕ ಜನರು ಅವರ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಜೀವನ ನಡೆಸಿ ಸಮಾಜದ ಏಳಿಗೆಗಾಗಿ ದುಡಿಯುತ್ತಿದ್ದಾರೆ. ಇವರ ಆದರ್ಶಗಳನ್ನು ಈಗಿನ ಯುವಕರು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಪ್ರಜೆಯಾಗಿ ಜೀವನ ಸಾಗಿಸಬೇಕೆಂದು ತಿಳಿಸಿದರು.
ಈ ಸಮಾರಂಭದಲ್ಲಿ ಭಾಗವಹಿಸಿದ ಎಲ್ಲರಿಗೂ ಅನ್ನದಾನದ ವ್ಯವಸ್ಥೆಯನ್ನು ಮಾಡಲಾಗಿತ್ತು.
ಈ ಸಂದರ್ಭದಲ್ಲಿ ಮುಖಂಡರಾದ ಜೈ ಮಾರುತಿ ಆಸ್ಪತ್ರೆಯ ಮಾಲೀಕರು ಹಾಗೂ ಬಿಜೆಪಿ ಮುಖಂಡರಾದ ಡಾ ನಾಗೇಶ್ ಕುಮಾರ್ ಮಹೇಶ್ ಕುಮಾರ್ (ಟೆಂಟ್ ಮಂಜಣ್ಣ) ಜಯಸಿಂಹ ಕನ್ನಡ ಯುವಕರ ವೇದಿಕೆಯ ಅಧ್ಯಕ್ಷರು ಶ್ರೀನಿವಾಸ್ ಹಾಗೂ ಪದಾಧಿಕಾರಿಗಳು ಹಾಗೂ ನೂರಾರು ಸಂಖ್ಯೆಯಲ್ಲಿ ಸ್ಥಳೀಯ ನಾಗರಿಕರು ಉಪಸ್ಥಿತರಿದ್ದರು