Oplus_16908288
ರಾಜಸ್ಥಾನದ ಸವಾಯಿ ಮಾನಸಿಂಗ್ ಕ್ರೀಡಾಂಗಣದಲ್ಲಿ ಜರುಗಿದ 2025ನೇ ಸಾಲಿನ ಐದನೇ ಖೇಲೋ ಇಂಡಿಯಾದ ಅಂತರ ವಿಶ್ವವಿದ್ಯಾಲಯಗಳ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ 3000 ಮೀಟರ್ ಸ್ಟೀಪಲ್ ಚೆಸನ್ ನಲ್ಲಿ 9 ನಿಮಿಷ 52.93 ಸೆಕೆಂಡುಗಳಲ್ಲಿ ಗುರಿ ತಲುಪುವ ಮೂಲಕ ಕರ್ನಾಟಕ ಕಲಾ ಕಾಲೇಜಿನ ನಾಗರಾಜ ದಿವಟೆ ಚಿನ್ನದ ಪದಕ ಪಡೆದಿದ್ದಾರೆ.

ಪ್ರಸ್ತುತ ನಾಗರಾಜ ದಿವಟೆ ಕರ್ನಾಟಕ ಕಲಾ ಕಾಲೇಜಿನ ವಾಣಿಜ್ಯ ವಿಷಯದ ಅಂತಿಮ ವರ್ಷದ ವಿದ್ಯಾರ್ಥಿಯಾಗಿದ್ದಾನೆ. ಈತನ ಸಾಧನೆಗೆ ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ.ಎ.ಎಂ.ಖಾನ್, ಕುಲಸಚಿವರಾದ ಡಾ.ಶಂಕರ ವಣಿಕ್ಯಾಳ, ಕರ್ನಾಟಕ ಕಲಾ ಕಾಲೇಜಿನ ಪ್ರಾಚಾರ್ಯರಾದ ಡಾ.ಐ.ಸಿ.ಮುಳಗುಂದ, ಕರ್ನಾಟಕ ಕಲಾ ಕಾಲೇಜಿನ ದೈಹಿಕ ಕ್ರೀಡಾ ನಿರ್ದೇಶಕರಾದ ಮಂಜುನಾಥ ಅಸುಂಡಿ, ಕಾಲೇಜಿನ ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ನಾಗರಾಜ ದಿವಟೆಗೆ ಅಭಿನಂದನೆ ಸಲ್ಲಿಸಿರಿತ್ತಾರೆ.
