
ಪಬ್ಲಿಕ್ ರೈಡ ನ್ಯೂಸ್ ಹುಬ್ಬಳ್ಳಿ
ತಂದೆಯೊಂದಿಗೆ ಜಮೀನಿನಲ್ಲಿ ಕೆಲಸ ಮಾಡುತ್ತಿದ ಯುವಕನಿಗೆ ಹಾವು ಕಚ್ಚಿದ್ದು, ತನ್ನಗೆ ಕಚ್ಚಿದ ಹಾವನ್ನು ಸಾಯಿಸಿ ಹಾವಿನೊಂದಿಗೆ ಆಸ್ಪತ್ರೆಗೆ ಯುವಕ ಹಾಗೂ ಯುವಕನ ತಂದೆ ಚಿಕಿತ್ಸೆಗೆ ಬಂದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಹುಬ್ಬಳ್ಳಿ ತಾಲೂಕಿನ ಇಂಗಳಗಿ ಗ್ರಾಮದ ಫಕ್ಕೀರಪ್ಪ ಅಣ್ಣಿಗೇರಿ ಎಂಬ ಯುವಕನಿಗೆ ಹವು ಕಚ್ಚಿದೆ. ಬುಧವಾರ ಸಂಜೆ 5 ಗಂಟೆ ಸುಮಾರಿಗೆ ಯುವಕ ತನ್ನ ತಂದೆ ಜೊತೆ ಜಮೀನಿನಲ್ಲಿ ಶೇಂಗಾ ಕೀಳಲು ಹೋಗಿದ್ದ ಸಮಯದಲ್ಲಿ ಹಾವು ಕಚ್ಚಿದೆ. ಹಾವು ಕಚ್ಚಿದ ಕೂಡಲೇ ಯುವಕ ಹಾಗೂ ತಂದೆ ಹಾವಿನ ತಲೆ ಜಜ್ಜಿ ಕೊಂದಿದ್ದಾರೆ. ಇಬ್ಬರು ಸಾಯಿಸಿದ ಹಾವಿನ ಜೊತೆ ಆಸ್ಪತ್ರೆಗೆ ಬಂದು ಚಿಕಿತ್ಸೆಗೆ ದಾಖಲಾಗಿದ್ದಾರೆ.
ಹಾವು ನೋಡಿದ ಆಸ್ಪತ್ರೆಯ ಸಿಬ್ಬಂದಿಗಳು ಹೌ ಹಾರಿದ್ದಾರೆ. ಈ ಕುರಿತಂತೆ ಯುವಕನ ತಂದೆ ಈರಪ್ಪ ಅಣ್ಣಿಗೇರಿ ಪ್ರತಿಕ್ರಿಯೆ ನೀಡಿದ್ದು, ಹೊಲದಲ್ಲಿ ಕೆಲಸ ಮಾಡುವಾಗ ಹಾವು ಕಚ್ಚಿದೆ. ಕೂಡಲೇ ಹಾವನ್ನು ಚಚ್ಚಿ ಹಾಳಿ ಚೀಲದಲ್ಲಿ ಹಾಕಿಕೊಂಡು ಬಂದು ವೈದ್ಯರಿಗೆ ತೋರಿಸಿದೆ. ಆಗ ವೈದ್ಯರ ಹೊರಗಡೆ ಹಾಕಲು ಹೇಳಿದರು. ಹಾವು ಚಿಣಗೇನ ಹಾವಾಗಿದೆ.
ವೈದ್ಯರಿಗೆ ಹಾವನ್ನ ತೋರಿಸಿ, ಇದೆ ಹಾವು ಕಚ್ಚಿದೆ ಚಿಕಿತ್ಸೆ ಕೊಡಿ ಎಂದು ದಾಖಲಾಗಿದ್ದಾನೆ ಎಂದರು. ಇನ್ನೂ ಹಾವು ಕಚ್ಚಿದ ಯುವಕನಿಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.