
ಪಬ್ಲಿಕ್ ರೈಡ್ ನ್ಯೂಸ್ ಧಾರವಾಡ
ಚಾಲಕನ ನಿಯಂತ್ರಣ ತಪ್ಪಿದ ಸರ್ಕಾರಿ ಸಾರಿಗೆ ಬಸ್ಸವೊಂದು ರಸ್ತೆ ಪಕ್ಕದ ಕಂದಕಕ್ಕೆ ಜಾರಿದ ಘಟನೆ ಧಾರವಾಡದ ನವಲಗುಂದ ತಾಲೂಕಿನ ಬ್ಯಾಹಟಿ ಗ್ರಾಮದ ಬಳಿ ನಡೆದಿದ್ದು, ಬಾರಿ ಅನಾಹುತವೊಂದು ತಪ್ಪಿದೆ.
ಬ್ಯಾಹಟ್ಟಿ ಕುಸುಗಲ್ ಮಧ್ಯೆ ಸಂಚರಿಸುವ ಸಾರಿಗೆ ಸಂಸ್ಥೆಯ ಬಸ್ಸು ಚಾಲಕನ ನಿಯಂತ್ರಣ ತಪ್ಪಿ ದುರ್ಘಟನೆ ಸಂಭವಿಸಿದೆ. ಇನ್ನೂ ಈ ಬಸ್ಸಿನಲ್ಲಿ ಸುಮಾರು 30 ಜನ ಪ್ರಯಾಣಿಸುತ್ತಿದ್ದರು ಎಂದುತಿಳಿದು ಬಂದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಒಂದು ವೇಳೆ ಸಾರಿಗೆ ಬಸ್ಸು ಅತೀವ ವೇಗವಾಗಿ ಬಂದು ಈದುರ್ಘಟನೆ ನಡೆದಿದ್ದರೆ, ದೊಡ್ಡ ಅನಾಹುತ ನಡೆದು ಹೋಗುತಿತ್ತು. ಇನ್ನೂ ಚಾಲಕನ ಸಮಯ ಪ್ರಜ್ಞೆಯಿಂದ ದೊಡ್ಡ ಅನಾಹುತವೊಂದ ಸದ್ಯತಪ್ಪಿದೆ. ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.