May 2, 2025

ಪಬ್ಲಿಕ್ ರೈಡ್ ನ್ಯೂಸ್ ಹೊಸಪೇಟೆ : ವಿಜಯ ಕರ್ನಾಟಕ ರಕ್ಷಣಾ ವೇದಿಕೆಯ ,ಜಿಲ್ಲಾ ಘಟಕ ಮತ್ತು ತಾಲೂಕು ಘಟಕ ಹಾಗೂ ಹೊಸಪೇಟೆಯ ಸಾರ್ವಜನಿಕ ಬಂಧುಗಳ ಸಾಮೂಹಿಕ ನಾಯಕತ್ವ ವತಿಯಿಂದ, ಹೊಸಪೇಟೆಯ ಗಾಂಧಿ ಚೌಕ ವೃತದಿಂದ ನಗರಸಭೆಯವರಿಗೂ, ಬೃಹತ್ ಪ್ರತಿಭಟನೆ ಯನ್ನು ಹೊಸಪೇಟೆಯ ಸಾರ್ವಜನಿಕರ ಆಸ್ತಿ ಗಳ ಪಾರ್ಮ್ ನಂಬರ್ ಮೂರು, F O R M NO. 3ರ, ಆಸ್ತಿಯ ದಾಖಲೆ ಪತ್ರದ, ಜ್ವಾಲಾಂತ ಸಮಸ್ಯೆಯ ಸಲುವಾಗಿ, ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಅನೇಕ ವರ್ಷಗಳಿಂದ ಹೊಸಪೇಟೆಯ ಸಾರ್ವಜನಿಕರಲ್ಲರು ಈ ಫಾರಂ ನಂಬರ್ ಮೂರರ ಸಲುವಾಗಿ, ಅನೇಕ ನೋವನ್ನು, ಕಷ್ಟವನ್ನು ಅನುಭವಿಸುತ್ತಿರುವ ಕಾರಣ, ಹೊಸಪೇಟೆಯ ಎಲ್ಲಾ ಸಾರ್ವಜನಿಕರು ,ಈ ಹೋರಾಟದಲ್ಲಿ ಭಾಗಿಗಳಾಗಿದ್ದರು.

ತಮ್ಮ ಆಸ್ತಿ, ಪಾಸ್ತಿಗಳಿಗೆ ಫಾರ್ಮ್ ನಂಬರ್ ಮೂರನ್ನು ಪಡೆಯಲು ಅನೇಕ ಕಷ್ಟಗಳನ್ನು ಅನುಭವಿಸುತ್ತಿರುವ, ಪ್ರತಿಯೊಬ್ಬರೂ ಸಹ ಹೋರಾಟದಲ್ಲಿ ಪಾಲ್ಗೊಂಡು ಹೋರಾಟವನ್ನು ಯಶಸ್ವಿಗೊಳಿಸಿದರು. ಮನವಿ ಪತ್ರವನ್ನು ಸ್ವೀಕರಿಸಿದ ಹೊಸಪೇಟೆ ನಗರಸಭೆಯ ಆಯುಕ್ತರಾದ ಶ್ರೀ ಚಂದ್ರಪ್ಪನವರು ಹಾಗೂ ನಗರಸಭೆಯ ಅಧ್ಯಕ್ಷರಾದ ರೂಪೇಶ್ ಕುಮಾರ್ ಅವರು ಒಂದು ತಿಂಗಳಲ್ಲಿ, ಫಾರಂ ನಂಬರ್ ಮೂರರ ಎಲ್ಲಾ ಸಮಸ್ಯೆಗಳನ್ನು ಮೊದಲ ಆದ್ಯತೆಯ ಮೇರೆಗೆ, ಬಗೆ ಹರಿಸುತ್ತೇವೆ ಎಂದು ಭರವಸೆಯನ್ನು ನೀಡಿದರು.. ಒಂದು ತಿಂಗಳ ಒಳಗಡೆ, ಈ ಸಮಸ್ಯೆ ಬಗೆಹರಿದಿದ್ದರೆ, ಮುಂದಿನ ದಿನಗಳಲ್ಲಿ ವಿಜಯನಗರ ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಅನಿರ್ದಿಷ್ಟಕಾಲ ಧರಣಿ ಸತ್ಯಾಗ್ರಹವನ್ನು ಮಾಡಲಾಗುತ್ತದೆ. ಎಂದು ವಿಜಯ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷರು ಎಚ್ಚರಿಕೆಯನ್ನು ನೀಡಿದರು.

ವಿಜಯ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಘಟಕ ತಾಲೂಕು ತಾಲೂಕು ಘಟಕಧ ಎಲ್ಲಾ ಪದಾಧಿಕಾರಿಗಳು ,ಸದಸ್ಯರು ಹಾಗೂ ಹೊಸಪೇಟೆಯ ಅನೇಕ ಸಾರ್ವಜನಿಕ ಬಂಧುಗಳು ಭಾಗಿಗಳಾಗಿ ಹೋರಾಟವನ್ನು ಯಶಸ್ವಿಗೊಳಿಸಿದರು.

ಹೋರಾಟದ ಮುಂದಾಳತ್ವವನ್ನು ವಿಜಯ ಕರ್ನಾಟಕದ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷರಾದಎಸ್ ಎಂ ಕಾಶಿನಾಥಯ್ಯ ಅವರು ಜಿಲ್ಲಾ ಗೌರವ ಅಧ್ಯಕ್ಷರಾದ ತಾರಿಹಳ್ಳಿ ಭರ್ಮಪ್ಪರವರು, ಜಿಲ್ಲಾ ಪ್ರಧಾನ ಕಾರ್ಯದರ್ಶಿಯವರಾದ ದೇವರ ಮನೆ ಶ್ರೀನಿವಾಸ್ ಜಿಲ್ಲಾ ಉಪಾಧ್ಯಕ್ಷರಾದ ಎ.ಎಂ .ಬಸವರಾಜ್ ರವರು ತಾಲೂಕು ಅಧ್ಯಕ್ಷರಾದ ವ್ಳಷ ಬೇಂದ್ರಯ ಹೆಚ್.ಎಂ, ತಾಲೂಕು ಪ್ರಧಾನ ಕಾರ್ಯದರ್ಶಿಗಳಾದ ಜಗದೀಶ್ ಎಸ್ ರವರು,ಜಿಲ್ಲಾ ಹಾಗೂ ತಾಲೂಕು ಘಟಕದ ಎಲ್ಲಾ ಪದಾಧಿಕಾರಿಗಳು, ಸದಸ್ಯರು ಹಾಗೂ ಹೊಸಪೇಟೆಯ ಸಾರ್ವಜನಿಕ ಬಂಧುಗಳು ಹೋರಾಟದಲ್ಲಿ ಭಾಗಿಗಳಾಗಿದ್ದರು.

Leave a Reply

Your email address will not be published. Required fields are marked *

error: Content is protected !!