
ಪಬ್ಲಿಕ್ ರೈಡ್ ನ್ಯೂಸ್ ಬೆಂಗಳೂರು ಉತ್ತರ: ದಾಸನಪುರ ಹೋಬಳಿ. ಕಿತ್ತನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಶುಕ್ರವಾರ ನಡೆದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಚುನಾವಣೆಯಲ್ಲಿ ಸರ್ವ ಸದಸ್ಯರ ಒಮ್ಮತದ ಮೇರೆಗೆ ಅವಿರೋಧ ಆಯ್ಕೆ ನಡೆಯಿತು ಪಂಚಾಯಿತಿಯಲ್ಲಿ 17 ಸದಸ್ಯ ಬಲವಿದ್ದು ಚುನಾವಣಾ ಅಧಿಕಾರಿ ಶ್ರೀಮತಿ ರೀನಾ ಅವರು ಅಧಿಕೃತ ಘೋಷಣೆ ಮಾಡಿದರು ಅಧ್ಯಕ್ಷೆಯಾಗಿ ಶ್ರೀಮತಿ ಭಾಗ್ಯ ಶೇಖರ್,ಉಪಾಧ್ಯಕ್ಷರಾಗಿ ಬೆಟ್ಟಳ್ಳಿ ಬಿಎಸ್ ಕುಮಾರ್. ಆಯ್ಕೆಯಾದರು.
ಕಿತ್ತನಹಳ್ಳಿ ಮಾಜಿ ಅಧ್ಯಕ್ಷರು ಹಾಲಿ ಸದಸ್ಯರಾದ ನರಸೇಗೌಡರ ಅಧ್ಯಕ್ಷತೆಯ ಸಮ್ಮುಖದಲ್ಲಿ ನಡೆಯಿತು. ಸಂದರ್ಭದಲ್ಲಿ ಮಾಜಿ ಅಧ್ಯಕ್ಷೆ ಹಾಲಿ ಸದಸ್ಯೆ ಶಾಂತಮ್ಮ, ಮಾಜಿ ಉಪಾಧ್ಯಕ್ಷ ರಮೇಶ್ ಗೌಡ. ಪಂಚಾಯತಿ ಸದಸ್ಯರಾದ ರವಿ ಗೌಡ, ಬೆಟ್ಟಳ್ಳಿ ಕಿರಣ್ ಕುಮಾರ್, ಸವಿತಾ ಕೆಂಪಯ್ಯ, ಪ್ರೇಮ ಹರೀಶ್ ಕುಮಾರ್, ಚಂದ್ರಶೇಖರ್ ಜಿ ವಿ, ದುಗ್ಗಲ ಸಿದ್ದಯ್ಯ, ಹೇಮಾವತಿ ಕೃಷ್ಣಪ್ಪ, ಪದ್ಮ ಜೆಜಿ, ಮೀನಾಕ್ಷಮ್ಮ, ನಾಗರತ್ನಮ್ಮ ಎಚ್, ಮತ್ತು ಪಂಚಾಯತಿ ಅಭಿವೃದ್ಧಿ ಅಧಿಕಾರಿ ಶಿವಭದ್ರಯ್ಯ, ಕಾರ್ಯದರ್ಶಿ ವಿ ಪ್ರತಿಮಾ, ದ್ವಿತೀಯ ದರ್ಜೆ, ರಾಮಾಂಜನೇ, ಹಾಗೂ ಸರ್ವ ಸಿಬ್ಬಂದಿ ವರ್ಗದವರು ಹಾಜರಿದ್ದರು.