
ಧಾರವಾಡ
ಜಿಲ್ಲೆಯಲ್ಲಿ ಡೆಂಗ್ಯೂಗೆ ಒಂದು ಮಗು ಬಲಿಯಾಗಿದ್ದು, ಜಿಲ್ಲಾ ಆಸ್ಪತ್ರೆಯಲ್ಲಿ ನಿತ್ಯವು ಡೆಂಗ್ಯೂ ಟೆಸ್ಟ್ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಡೆಂಗ್ಯೂ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಧಾರವಾಡ ಜಿಲ್ಲಾಧಿಕಾರಿ ದಿವ್ಯಪ್ರಭು ತಿಳಿಸಿದರು.
ಧಾರವಾಡದ ಕೆಲಗೇರಿಯಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಆರೋಗ್ಯ ಇಲಾಖೆಯ ನೇತೃತ್ವದಲ್ಲಿ ನಡೆದ ಡೆಂಗ್ಯೂ ಜಾಗೃತಿಯಲ್ಲಿ ಭಾಗಿಯಾಗಿ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಈಗಾಗಲೇ ಡೆಂಗ್ಯೂ ನ ಲಾರ್ವಾ ಎಲ್ಲೆಲ್ಲಿ ಉತ್ಪಾದನೆ ಆಗುತ್ತೆ ಅದನ್ನ ನಾವು ನಿಯಂತ್ರಣ ಮಾಡುತ್ತಿದ್ದೇವೆ.
2016 ಟೆಸ್ಟಿಂಗ್ ಗಳಲ್ಲಿ 254 ಕೇಸ್ ಗಳು ಪಾಸಿಟಿವ್ ಬಂದಿವೆ. ಈಗ ಜನವರಿಯಿಂದ ಇಲ್ಲಿಯವರೆಗೆ ಆಗಿರುವ ಟೆಸ್ಟಿಂಗ್‌ನಲ್ಲಿ 3 ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಂದು ಮಗು ಸಾವನಪ್ಪಿದೆ. ಉಳಿದವರು ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಪ್ರತಿ ದಿನ ಎಲ್ಲಾ ಆಸ್ಪತ್ರೆಗಳಲ್ಲಿ ಟೆಸ್ಟಿಂಗ್ ಮಾಡುತ್ತಿದ್ದೇವೆ. ನಮಗೆ ಕಿಟ್ ನ ಕೊರತೆ ಸದ್ಯಕ್ಕೆ ಇಲ್ಲ, ಖಾಸಗಿ ಆಸ್ಪತ್ರೆಯಲ್ಲಿ ದಾಖಲು ಆದರೂ ಸಹ ಅವರ ಬಳಿಯಿಂದ ಮಾಹಿತಿ ಪಡೆಯುತ್ತಿದ್ದೇವೆ ಎಂದರು.