April 19, 2025

ಹುಬ್ಬಳ್ಳಿ

ಯಾವುದೇ ಸರ್ಕಾರದಲ್ಲಿ ಇವರನ್ನೇ ಮುಖ್ಯಮಂತ್ರಿ ಮಾಡಿ ಅಂತಾ ಹೇಳೋದು ಮಠಾಧೀಶರ ಕೆಲಸವಲ್ಲ. ಮುಖ್ಯಮಂತ್ರಿ ಮಾಡೋದು ಆಡಳಿತ ಪಕ್ಷದ ಶಾಸಕರ ಕೆಲಸ.

ಸಲಹೆ ಕೇಳಿದ್ರೆ ಸಮಾಜದ ಗುರುಗಳಾಗಿ ಸಲಹೆ ಕೊಡಬೇಕು ಎಂದು ಕೂಡಲಸಂಗಮ ಪಂಚಮಸಾಲಿ‌ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು. ನಗರದಲ್ಲಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮೀಸಲಾತಿ ಪಾದಯಾತ್ರೆಯ ನಂತರ ಇವರನ್ನೇ ಮಂತ್ರಿ ಮಾಡಿ ಅಂತಾ ಹೇಳೋದು ಬಿಟ್ಟಿದ್ದೇವೆ. ನಮ್ಮ ಗುರಿಯೇನಿದ್ದರೂ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಕೊಡಿಸೋದು. ಮಹಾರಾಷ್ಟ್ರದಲ್ಲಿ ಮರಾಠಾ ಮೀಸಲಾತಿ ಹೋರಾಟದಿಂದ ಸ್ಪೂರ್ತಿಪಡೆದು ಹೋರಾಟ ಮಾಡುತ್ತಿದ್ದೇವೆ. ಸರ್ಕಾರ ಪಂಚಮಸಾಲಿ ಸಮಾಜದ ಬೇಡಿಕೆಗೆ ಸ್ಪಂದಿಸಿ ಪಂಚಮಸಾಲಿ ಸಮಾಜಕ್ಕೆ 2A ಮೀಸಲಾತಿ ಸಿಗುವವರೆಗೆ ಹೋರಾಟ ಮಾಡುತ್ತೇವೆ.

ರಾಜ್ಯ ಸರ್ಕಾರ ಮಳೆಗಾಲದ ಅಧಿವೇಶನದಲ್ಲಿ 2A ಮೀಸಲಾತಿ ಘೋಷಿಸಬೇಕು ಎಂದು ಆಗ್ರಹಿಸದ ಅವರು ಅಧಿವೇಶನದಲ್ಲಿ ಮೀಸಲಾತಿ ಹಕ್ಕು ಪ್ರತಿಪಾದಿಸಲು ಪಂಚಮಸಾಲಿ ಸಮಾಜದ ಶಾಸಕರನ್ನು ಒತ್ತಾಯಿಸಲಾಗುವುದು.

ಜುಲೈ 6ರಂದು ಹುಬ್ಬಳ್ಳಿಯಲ್ಲಿ ಪತ್ರ ಚಳುವಳಿ ನಡೆಯಲಿದೆ. ಅಂದು ಶಾಸಕ ಎಮ್‌.ಆರ್. ಪಾಟೀಲ್, ಅರವಿಂದ ಬೆಲ್ಲದ್ ಮನೆಗೆ ಹೋಗಿ ಆಗ್ರಹ ಪತ್ರ ನೀಡಲಾಗುವುದು.

ನಮ್ಮ ಶಾಸಕರು ಅಧಿವೇಶನದಲ್ಲಿ ಮೀಸಲಾತಿಗೆ ಆಗ್ರಹಿಸದೆ ಇರುವುದು ಸಮಾಜಕ್ಕೆ ನಿರಾಸೆ ಮೂಡಿಸಿದೆ ಎಂದರು.

Leave a Reply

Your email address will not be published. Required fields are marked *

error: Content is protected !!