
ನೆಲಮಂಗಲ:ನಗರ ಸಭೆಯ ಪ್ರಭಾರ ಅಧ್ಯಕ್ಷರಾಗಿ ಎಂ ಜಿ ಸುಜಾತ ಮುನಿಯಪ್ಪ ಪದಗ್ರಹಣ ಮಾಡಿದ ಹಿನ್ನೆಲೆ ತಾಲೂಕಿನ ಮುಖಂಡರುಗಳು ಸಂಘದ ಮುಖಂಡರುಗಳು ಹಾಗೂ ಸ್ನೇಹಿತರು ಸಂಬಂಧಿಕರು ಹಾರ,ಹೋಗುಚ್ಚ ನೀಡಿ ಅಭಿನಂದಿಸಿದರು.
ನೂತನ ಪ್ರಭಾರ ಅಧ್ಯಕ್ಷೆ ಎಂ ಜಿ ಸುಜಾತ ಮುನಿಯಪ್ಪ ಮಾತನಾಡಿ ನಗರಸಭೆ ಅಧ್ಯಕ್ಷರಾಗಿದ್ದ ಲತಾ ಹೇಮಂತ್ ಕುಮಾರ್ ಅವರು ರಾಜೀನಾಮೆ ನೀಡಿರುವುದರಿಂದ ಜಿಲ್ಲಾ ಆಡಳಿತ ಆದೇಶದಂತೆ ನನ್ನನ್ನು ಪ್ರಭಾರ ಅಧ್ಯಕ್ಷರಾಗಿ ನೇಮಕ ಮಾಡಿರುತ್ತಾರೆ ಈ ಸಂದರ್ಭದಲ್ಲಿ ನೆಲಮಂಗಲ ಶಾಸಕರಾದ ಎನ್ ಶ್ರೀನಿವಾಸ್ ರವರಿಗೆ ಹಾಗೂ ನಗರಸಭೆಯ ಎಲ್ಲ ಸದಸ್ಯರುಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಮುಂದಿನ ದಿನಗಳಲ್ಲಿ ಎಲ್ಲಾ ಸದಸ್ಯರುಗಳನ್ನು ಒಗ್ಗೂಡಿಸಿಕೊಂಡು ಜಿಲ್ಲಾ ಆಡಳಿತ ಆದೇಶದಂತೆ ನಗರದ ಅಭಿವೃದ್ಧಿಗೆ ಶ್ರಮ ವಹಿಸುತ್ತೇನೆ ಎಂದರು.
ಸಂದರ್ಭದಲ್ಲಿ ಕಾಂಗ್ರೆಸ್ ಯುವ ಮುಖಂಡ ಮಲ್ಲೇಶ್, ಕವಿ ನಾಗರಾಜು, ಬಿಎಸ್ಪಿ ಮೂರ್ತಿ, ಗಂಗಾಧರ್, ಪೂಜಂಗಯ್ಯ,ಮೋಹನ್ ಮತ್ತಿತರಿದ್ದರು