
ಪಬ್ಲಿಕ್ ರೈಡ್ ನ್ಯೂಸ್ ಪೀಣ್ಯ ದಾಸರಹಳ್ಳಿ ಯಾವುದೇ ವ್ಯಕ್ತಿ ಸಂಘಟನೆಯ ಪದಾಧಿಕಾರಿ ಆದರೆ ಸಾಲದು ಸ್ಥಳೀಯವಾಗಿ ಸಾಮಾನ್ಯ ಜನರಿಗೆ ಆಗುವ ದೌರ್ಜನ್ಯದ ವಿರುದ್ಧ ಹೋರಾಟ ಮಾಡಿ ಅನ್ಯಾಯಕ್ಕೂಳದ ವ್ಯಕ್ತಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕು ಎಂದು ಕರ್ನಾಟಕ ಬಹುಜನ ಚಳುವಳಿಯ ರಾಜ್ಯಾಧ್ಯಕ್ಷ ಕನಕೆನಳ್ಳಿ ಕೃಷ್ಣಪ್ಪ ಹೇಳಿದರು.
ಇವರು ಚಿಕ್ಕಮಂಗಳೂರು ಜಿಲ್ಲೆಯ ಬಹುಜನ ಚಳುವಳಿಯ ಜಿಲ್ಲಾ ಶಾಖೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು
ಪ್ರಸ್ತುತ ಕಾಲಮಾನದಲ್ಲಿ ಯಾವುದಾದರೂ ಸಂಘಟನೆಯ ಪದಾಧಿಕಾರಿಯಾಗಿ ಒಂದು ವಿಸಿಟಿಂಗ್ ಕಾರ್ಡ್ ಮಾಡಿಸಿಕೊಂಡು ಅದರ ಮುಖಾಂತರ ಅಕ್ರಮ ಚಟುವಟಿಕೆಗಳಿಗೆ ಸಂಘಟನೆ ಹೆಸರನ್ನು ಬಳಸಿಕೊಂಡು ವಸೂಲಿಗೆ ಇಳಿಯುವುದನ್ನು ಬಿಟ್ಟು ನ್ಯಾಯದ ಪರ ಹೋರಾಟ ಮಾಡಿ ಸ್ಥಳೀಯವಾಗಿ ಉತ್ತಮ ಹೆಸರು ಗಳಿಸಿಕೊಂಡು ಸಂಘಟನೆಯನ್ನು ಪ್ರಬಲವಾಗಿ ಕಟ್ಟಬೇಕಾಗಿ ಮನವಿ ಮಾಡಿದರು.
ಈ ವೇಳೆ ಚಿಕ್ಕಮಂಗಳೂರು ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾಗಿರುವ ಮೈಕಲ್ ಬಾಬುರವರ ಜನ್ಮದಿನವನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ಬಹುಜನ ಚಳುವಳಿಯ ಚಿಕ್ಕಮಂಗಳೂರು ಶಾಖೆಯ ಪದಾಧಿಕಾರಿಗಳು, ಪತ್ರಕರ್ತರಾದ ಎನ್. ನರಸಿಂಹರಾಜು, ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ದೌರ್ಜನ್ಯ ನಿಯಂತ್ರಣ ಸಮಿತಿಯ ಕರ್ನಾಟಕ ಸರ್ಕಾರದ ಮಾಜಿ ಸದಸ್ಯ ಹಾಗೂ ಪತ್ರಕರ್ತ ಡಾ. ಕುಮಾರಯ್ಯ , ಬಹುಜನ ಚಳುವಳಿಯ ಕಾರ್ಯಾಧ್ಯಕ್ಷ ವಿಜಯಕುಮಾರ್ ಬೆಂಗಳೂರು ನಗರ ಜಿಲ್ಲಾ ಅಧ್ಯಕ್ಷ ಕೆ ಆರ್ ಕುಮಾರ್ ಆರ್ಟ್ಸ್ ಶಿವು ಮಹಿಳಾ ಮುಖಂಡರಾದ ಪಳನಿಯಮ್ಮಳ್ ಸುನಿತಾ ರೂಪ ಇನ್ನು ಮುಂತಾದ ಸ್ಥಳೀಯ ಮುಖಂಡರು ಭಾಗವಹಿಸಿದ್ದರು