
ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರಾಗಿದ್ದ ರೇಣುಕಾ ಸುಕುಮಾರ್ ಅವರನ್ನು ವರ್ಗಾವಣೆ ಮಾಡಲಾಗಿದೆ. ಅವರ ಸ್ಥಾನಕ್ಕೆ ಮಂಗಳೂರು ನಗರ ಕಮಿಷನರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಎನ್ ಶಶಿಕುಮಾರ್ ಅವರು ನೇಮಕವಾಗಲಿದ್ದಾರೆ.
ಡಿಸಿಪಿ (ಕಾನೂನು ಮತ್ತು ಸುವ್ಯವಸ್ಥೆ) ಕುಶಾಲ್ ಚೌಕ್ಸೆ ಅವರನ್ನೂ ಕೂಡಾ ಸರ್ಕಾರ ವರ್ಗಾವಣೆ ಮಾಡಿದ್ದು ಅವರ ಬದಲಿಗೆ ಮಹಾನಿಂಗ್ ನಂದಗಾಂವಿ ಈ ಸ್ಥಾನಕ್ಕೆ ಬರಲಿದ್ದಾರೆ. ಹೆಚ್ಚುವರಿಯಾಗಿ, ಐಜಿಪಿ ಲಾಭು ರಾಮ್ ಅವರನ್ನು ಕೇಂದ್ರ ವಲಯದ ಐಜಿಪಿಯಾಗಿ ನೇಮಿಸಲಾಗಿದೆ.