
ಪಬ್ಲಿಕ್ ರೈಡ್ ನ್ಯೂಸ್ ನೆಲಮಂಗಲ:ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ರಾಜ್ಯಾಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ್ ನೇತೃತ್ವದಲ್ಲಿ ನೆಲಮಂಗಲ ತಾಲ್ಲೂಕಿನ ಅಧ್ಯಕ್ಷರಾಗಿ ಇಂದು ಸಂಜೆ ಪತ್ರಿಕೆ ವರದಿಗಾರರಾದ ಬೆಟ್ಟಹಳ್ಳಿ ರುದ್ರೇಶ್, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಬಿ.ಕೆ ಮಹೇಶ್, ಜಿಲ್ಲಾಧ್ಯಕ್ಷರಾಗಿ ಡಿ. ಸಿದ್ದರಾಜು ರವರನ್ನು ಆಯ್ಕೆ ಮಾಡಲಾಯಿತು.
ನಗರದ ಪರಿವೀಕ್ಷಣ ಮಂದಿರದಲ್ಲಿ ಆಯೋಜಿಸಲಾಗಿದ್ದ ಸದಸ್ಯರ ಗುರುತಿನ ಚೀಟಿ ವಿತರಣಾ ಕಾರ್ಯಕ್ರಮದಲ್ಲಿ ನೂತನವಾಗಿ ಆಯ್ಕೆಯಾದವರಿಗೆ ನೇಮಕಾತಿ ಆದೇಶ ಪತ್ರ ಕೊಟ್ಟು ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ತಾಲೂಕಿನ ಸದಸ್ಯರುಗಳಿಗೆ ಗುರುತಿನ ಚೀಟಿ ವಿತರಣೆ ಮಾಡಲಾಯಿತು.
ನೂತನವಾಗಿ ಅಧ್ಯಕ್ಷರಾದ ಬೆಟ್ಟಹಳ್ಳಿ ರುದ್ರೇಶ್ ಮಾತನಾಡಿ ನನ್ನನು ತಾಲ್ಲೂಕು ಅಧ್ಯಕ್ಷ ನಾಗಿ ಆಯ್ಕೆ ಮಾಡಿದ ರಾಜಾದ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ ಸರ್ ರವರಿಗೆ ಹಾಗೂ ರಾಜ್ಯ ಕಾರ್ಯಕಾರಿ ಸಮಿತಿಯ ಸದಸ್ಯರಾದ ಬಿ ಕೆ ಮಹೇಶಣ್ಣ ರವರಿಗೆ ಜಿಲ್ಲಾಧ್ಯಕ್ಷರಾದ ಡಿ ಸಿದ್ದರಾಜಣ್ಣ ಮತ್ತು ತಾಲ್ಲೂಕಿನ ಎಲ್ಲಾ ಸದಸ್ಯರುಗಳಿಗೆ ನನ್ನ ತುಂಬು ಹೃದಯದ ಅಭಿನಂದನೆಗಳು ಸಲ್ಲಿಸುತ್ತೇನೆ.
ತಾಲೂಕಿನಾದ್ಯಂತ ಪತ್ರಕರ್ತರನ್ನು ಸಂಘಟಿಸುವುದರ ಜೊತೆಗೆ ಅವರ ಮೂಲಭೂತ ಹಕ್ಕುಗಳಿಗೆ ಹಾಗೂ ಎದುರಾಗುವ ಸಮಸ್ಯೆಗಳಿಗೆ ಧ್ವನಿಯಾಗಿ ಸಂಘ ಮತ್ತು ಸದಸ್ಯರ ಹಿತಾಸಕ್ತಿ ಕಾಪಾಡುವುದರೊಂದಿಗೆ ಸಂಘದ ಆಶಯಗಳನ್ನು ಈಡೇರಿಸುವಲ್ಲಿ ಎಲ್ಲರವಿಶ್ವಾಸದೊಂದಿಗೆ ಕೆಲಸ ನಿರ್ವಹಿಸುತ್ತೆನೆ.
ಮುಂದಿನ ದಿನಗಳಲ್ಲಿ ಪ್ರತಿ ತಿಂಗಳು ಒಂದೊಂದು ಚಟುವಟಿಕೆಗಳನ್ನು ಮಾಡುವುದರ ಮೂಲಕ ಸಂಘವನ್ನು ಸದೃಢವನ್ನಾಗಿ ಮಾಡುವ ಸಂಕಲ್ಪ ಕೈಗೊಂಡಿದ್ದು ರಾಜ್ಯಾಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ್ ರವರ ಹಾಗೂ ಜಿಲ್ಲಾಧ್ಯಕ್ಷರಾ ನೇತೃತ್ವದಲ್ಲಿ ಅವರ ಆದೇಶದಂತೆ ಅವರ ಮಾರ್ಗದರ್ಶನದಲ್ಲಿ ನಮ್ಮ ಸಂಘಟನೆಯನ್ನು ತಾಲೂಕಿನಲ್ಲಿ ಮತ್ತೊಷ್ಟು ಬಲಿಷ್ಠ ಪಡಿಸಲು ಶ್ರಮಿಸುತ್ತೆನೆ ಎಂದರು.
ರಾಜ್ಯ ಕಾರ್ಯ ಸಮಿತಿ ಸದಸ್ಯರಾದ ಬಿ ಕೆ ಮಹೇಶ್ ಮಾತನಾಡಿ ನೂತನವಾಗಿ ಆಯ್ಕೆಯಾದಂತಹ ಜಿಲ್ಲಾಧ್ಯಕ್ಷರು ಹಾಗೂ ತಾಲೂಕು ಅಧ್ಯಕ್ಷರಿಗೆ ರಾಜ್ಯಾಧ್ಯಕ್ಷರ ಆದೇಶದ ಪತ್ರ ನೀಡುವ ಮೂಲಕ ಅಭಿನಂದಿಸಿ ಹೊಸದಾಗಿ ನೇಮಕಗೊಂಡಿರುವ ಜಿಲ್ಲಾಧ್ಯಕ್ಷ ಹಾಗೂ ತಾಲೂಕು ಅಧ್ಯಕ್ಷರುಗಳು ತಾಲೂಕು ಸಮಿತಿಯನ್ನು ರಚನೆ ಮಾಡುವ ಮೂಲಕ ಪತ್ರಕರ್ತರಿಗೆ ಸರಕಾರದಿಂದ ಸಿಗುವ ಮೂಲಭೂತ ಸವಲತ್ತುಗಳನ್ನು ಒದಗಿಸಿಕೊಡುವಂತೆ ಹಾಗೂ ಕ್ಷಮಾಭಿವೃದ್ಧಿಗೆ ಸ್ಪಂದಿಸುವಂತೆ ತಿಳುವಳಿಕೆ ಹೇಳಿದರು.
ನೂತನ ಜಿಲ್ಲಾಧ್ಯಕ್ಷ ಡಿ ಸಿದ್ದರಾಜು ಮಾತನಾಡಿ ಜಿಲ್ಲಾಧ್ಯಂತ ಕಾರ್ಯನಿರ್ವಹಿಸುತ್ತಿರುವ ನಾಲ್ಕು ತಾಲೂಕಿನ ಪತ್ರಕರ್ತರಿಗೆ ಎದುರಾಗುವ ಸಮಸ್ಯೆಗಳಿಗೆ ಧ್ವನಿಯಾಗಿ ನಿಲ್ಲುತ್ತೇನೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಛಲವಾದಿ ಪತ್ರಿಕೆ ಮಹೇಶ್,ಅವಿನಾಶ್ ಎಸ್, ಶ್ರೀನಿವಾಸ್, ರಾಕೇಶ್, ಲಕ್ಷ್ಮಣ್, ಮೋಹನ್, ವೇಣುಗೋಪಾಲ್, ಭಾಗಿಯಾಗಿದ್ದರು.
ವಿಶೇಷ ಆಹ್ವಾನಿತರಾಗಿ ಎಎಪಿ ಪಕ್ಷದ ಜಿಲ್ಲಾಧ್ಯಕ್ಷ ನಂಜುಂಡಯ್ಯ, ಬಿ ಎಸ್ ಪಿ ಮೂರ್ತಿ, ವಾಲ್ಮೀಕಿ ಸಂಘದ ರಾಜ್ಯ ಉಪಾಧ್ಯಕ್ಷ ಶ್ರೀನಿವಾಸ್, ಕರ್ನಾಟಕ ಭೀಮ್ ಸೇನೆ ತಾಲೂಕು ಅಧ್ಯಕ್ಷ ಕುಮಾರ್, ಬಹುಜನ ಚಳುವಳಿ ಜಿಲ್ಲಾಧ್ಯಕ್ಷ ಅರುಣ್ ಕುಮಾರ್ ಭಾಗಿಯಾಗಿ ನೂತನವಾಗಿ ಆಯ್ಕೆಯಾದ ಸದಸ್ಯರುಗಳಿಗೆ ಹಾರ ಹೋಗುಚ್ಚ ಕೊಟ್ಟು ಅಭಿನಂದನೆ ಸಲ್ಲಿಸಿದರು.
ವಿಕಾಸ್ ನೆಲಮಂಗಲ ವರದಿಗಾರರು