April 19, 2025

ಧಾರವಾಡ: ಇತ್ತೀಚೆಗೆ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದಲ್ಲಿ ಅತೀ ಹೆಚ್ಚು ಅಂಕ ಪಡೆದು ಸಾಧನೆ ಮಾಡಿದ ಇಬ್ಬರು ವಿದ್ಯಾರ್ಥಿಗಳಿಗೆ, ಧಾರವಾಡ ಸಂಚಾರಿ ಠಾಣೆಯ ಎಎಸ್‌ಐ ಅವರು ಸನ್ಮಾನ ಮಾಡಿ ಗೌರವಿಸಿದರು.

ನಗರದ ಹೊಸಾಯಲ್ಲಾಪುರದ ಪ್ರಣವ ಅಜಿತ ನರಗುಂದಕರ ಶೇಕಡಾ 91 % ಮಾಡಿದ್ದು, ಮನ್ವಿತಾ ಕಲಾಲ ಶೇಕಡಾ 94 % ಪಡೆದು ಸಾಧನೆ ಮಾಡಿದ ವಿದ್ಯಾರ್ಥಿಗಳಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಧಾರವಾಡ ಸಂಚಾರಿ ಠಾಣೆ ಎಎಸ್‌ಐ ವಿರೇಶ ಬಳ್ಳಾರಿಯವರು ಸ್ವತಃ ಸ್ಟೂಡೆಂಟ್ಸ್ ಮನೆಗೆ ಭೇಟಿ ನೀಡಿ ಶಾಲು ಹಾಕಿ ಸನ್ಮಾನ ಮಾಡಿದ್ದಾರೆ.

ಧಾರವಾಡ ಸಂಚಾರಿ ಠಾಣೆಯ ಎಎಸ್‌ಐ ಅಧಿಕಾರಿ ವಿರೇಶ ಬಳ್ಳಾರಿಯವರು ಈ ಕಾರ್ಯಕ್ಕೆ ಶ್ಲಾಘನೀಯವಾಗಿದೆ. ಪೊಲೀಸರು ಅಂದ್ರೆ ಕೇವಲ ಠಾಣೆ, ದಂಡ, ಅಪರಾಧಿಗಳಿಗೆ ಶಿಕ್ಷೆ ಕೊಡಿಸುವುದಕ್ಕೆ ಮಾತ್ರ ಸಿಮೀತವಾಗದೆ ವಿರೇಶ ಬಳ್ಳಾರಿಯವರು ಸಾಧನೆಗೈದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಬೆನ್ನು ತಟ್ಟಿರುವುದು ಒಳ್ಳೆಯ ಸಂಗತಿಯಾಗಿದೆ‌.

Leave a Reply

Your email address will not be published. Required fields are marked *

error: Content is protected !!