April 19, 2025

ಪಬ್ಲಿಕ್ ರೈಡ್ ನ್ಯೂಸ್ ಹುಬ್ಬಳ್ಳಿ:

ಟಾಟಾ ಏಸ್ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ನಗರದ ಹು-ಧಾ ಮುಖ್ಯ ರಸ್ತೆಯ ಎಪಿಎಂಸಿ ಬಳಿಯಲ್ಲಿ ನಡೆದಿದೆ.

ನಗರದ ಅಮರಗೋಳ ನಿವಾಸಿ ಖಲಂದರ್ (45) ಎಂಬುವವರ ಕಾಲಿಗೆ ಬಲವಾದ ಪೆಟ್ಟು ಬಿದ್ದು ತುಂಡರಿಸಿದಂತಾಗಿದೆ. ಟಾಟಾ ಏಸ್ ಚಾಲಕನ ಅತಿ ವೇಗವೇ ಈ ಘಟನೆಗೆ ಕಾರಣವೆಂಬುದನ್ನು ಸ್ಥಳೀಯರಿಂದ ತಿಳಿದು ಬಂದಿದೆ.

ಗಂಭೀರವಾಗಿ ಗಾಯಗೊಂಡ ಆತನನ್ನು ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.ಉತ್ತರ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ತನಿಖೆ ಮುಂದುವರೆದಿದೆ.

Leave a Reply

Your email address will not be published. Required fields are marked *

error: Content is protected !!