
ಪಬ್ಲಿಕ್ ರೈಡ್ ನ್ಯೂಸ್ ಪೀಣ್ಯ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಹೆಗ್ಗನಹಳ್ಳಿ ವಾರ್ಡಿನ ಸಂಜೀವಿನಿ ನಗರದಲ್ಲಿ ನೂತನವಾಗಿ ಕೊರೆಯಲಾದ ಕೊಳವೆ ಬಾವಿಯ ನೀರನ್ನು ಪೈಪಿನ ಮೂಲಕ ನೀಡುವ ಕಾರ್ಯಕ್ಕೆ ಶಾಸಕ ಮುನಿರಾಜು ಚಾಲನೆ ನೀಡಿ ಮಾತನಾಡಿದ ಅವರು ಯಾವುದೇ ಕಾರಣಕ್ಕೂ ಮನೆಗಳಿಗೆ ಬಿಟ್ಟು ಫ್ಯಾಕ್ಟರಿ ಶೆಡ್ಡುಗಳಿಗೆ ನೀರನ್ನು ನೀಡಬಾರದು ಎಂದು ಬಿ ಡಬ್ಲ್ಯೂ ಎಸ್ ಎಸ್ ಬಿ ಅಧಿಕಾರಿಗಳಿಗೆ ಹಾಗೂ ವಾಟರ್ ಮ್ಯಾನ್ ಗಳಿಗೆ ಸೂಚಿಸಿದರು.
ಈ ವೇಳೆ ಮಾಜಿ ಬಿಬಿಎಂಪಿ ಸದಸ್ಯರ ಪತಿ ಕೃಷ್ಣಯ್ಯ ವಾರ್ಡ್ ಅಧ್ಯಕ್ಷ ಸಪ್ತಗಿರಿ ಮಂಜುನಾಥ್ ಸಂಘಟನಾ ಕಾರ್ಯದರ್ಶಿ ಸಪ್ತಗಿರಿ ಆನಂದ್ ಹಿಂದುಳಿದ ವರ್ಗದ ಮುಖಂಡ ಸ್ವಾಮಿ ಓಂ ಶಕ್ತಿ ಶ್ರೀನಿವಾಸ್ ರಂಗಸ್ವಾಮಿ ಹರೀಶ್ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಹೇಮಂತ್ ಕುಮಾರ್ ಕಿರಿಯ ಅಭಿಯಂತರರು ಸಿದ್ದರಾಜು ಗುತ್ತಿಗೆದಾರ ನಾಗೇಶ್ ಸೇರಿದಂತೆ ಮಹಿಳೆಯರು ಸಾರ್ವಜನಿಕರು ಭಾಗವಹಿಸಿದ್ದರು.