
ಧಾರವಾಡ
ರಾಷ್ಟ್ರೀಯ ಹೆದ್ದಾರಿ ಎನ್ ಹೆಚ್ 4 ರಲ್ಲಿ ರಸ್ತೆ ಬದಿ ನಿಲ್ಲಿಸಿದ ಲಾರಿಗೆ ಹಿಂಬದಿಯಿಂದ ಬೈಕ್ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಸಾವನಪ್ಪಿದ ಘಟನೆ, ಧಾರವಾಡದ ಕೋಟೂರು ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ತಡ ರಾತ್ರಿ ನಡೆದಿದೆ.
ಧಾರವಾಡ ತಾಲೂಕಿನ ಕೋಟೂರು ಗ್ರಾಮದ ನ್ಯಾಷನಲ್ ಹೈವೇ ಪಕ್ಕದ ಸರ್ಕಾರಿ ಶಾಲೆಯ ಬಳಿಯ ಹೆದ್ದಾರಿಯಲ್ಲಿ ದುರ್ಘಟನೆ ನಡೆದಿದೆ. ರಸ್ತೆ ಸೈಡಿನಲ್ಲಿ ಬೈಕ್ ಪಾರ್ಕ ಮಾಡಿರುವುದನ್ನು ಗಮನಿಸದೇ ಬಂದ ಬೈಕ್ ಸವಾರ, ನೇರವಾಗಿ ಲಾರಿ ಹಿಂಬದಿ ಗುದಿದ್ದಾನೆ. ಇದರಿಂದಾಗಿ ತಲೆ ಭಾಗಕ್ಕೆ ತೀವ್ರವಾದ ಪೆಟ್ಟು ಬಿದ್ದು ಸ್ಥಳದಲ್ಲಿಯೇ ಬೈಲ್ ಸವಾರ ಕೊನೆಯುಸಿರೆಳೆದಿದ್ದಾನೆ. ಇನ್ನೂ ಬೈಕ್ ಸವಾರನ ಹೆಸರು ತಿಳಿದು ಬರಬೇಕಾಗಿದೆ. ಸ್ಥಳೀಯರ ಮಾಹಿತಿ ಮೇರೆಗೆ ಘಟನಾ ಸ್ಥಳಕ್ಲೆ ಭೇಟಿ ನೀಡಿದ ಗರಗ ಠಾಣೆಯ ಪೊಲೀಸರು, ಬೈಕ್ ಸವಾರನ ಮೃತ ದೇಹವನ್ನ ತಡ ರಾತ್ರಿ ಜಿಲ್ಲಾ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದಾರೆ. ಗರಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರ ಪ್ರಾಥಮಿಕ ತನಿಖೆಯ ನಂತರ ಸವಾರನ ವಿವರ ತಿಳಿದು ಬರಬೇಕಿದೆ.