
ಪಬ್ಲಿಕ್ ರೈಡ್ ನ್ಯೂಸ್ ಪೀಣ್ಯ ದಾಸರಹಳ್ಳಿ ನಿಮ್ಮ ಬಿಟ್ಟಿ ಭಾಗ್ಯಗಳನ್ನು ಬದಿಗಿಟ್ಟು ದಾಸರಹಳ್ಳಿ ಕ್ಷೇತ್ರಕ್ಕೆ ಕುಡಿಯುವ ನೀರಿನ ಭಾಗ್ಯನೀಡಿ ಎಂದು ಶಾಸಕ ಎಸ್ ಮುನಿರಾಜು ಸರ್ಕಾರಕ್ಕೆ ಅಗ್ರಹಿಸಿದರು.
ಸಿಡೇದಹಳ್ಳಿಯ ಎನ್ ಎಮ್ ಹೆಚ್ ಬಡಾವಣೆ ಹಾಗೂ ಅಬ್ಬಿಗೆರೆಯ ವೀರಾಂಜನಪ್ಪ ಬಡಾವಣೆಯಲ್ಲಿ ಬೋರ್ವೆಲ್ ನಿಂದ ನೀರೆತ್ತುವ ಪಂಪ್ ಸೆಟ್ ಗೆ ಚಾಲನೆ ನೀಡಿ ಮಾತಾನಡಿದರು.
ಕಾಂಗ್ರೆಸ್ ಸರ್ಕಾರ ಬಿಟ್ಟಿ ಭಾಗ್ಯಗಳಿಗೆ ಹಣ ನೀಡುತ್ತಿರುವುದರಿಂದ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗಿದ್ದು ಯಾವ ಕಾಮಗಾರಿಗಳಿಗೆ ಸರ್ಕಾರ ಹಣ ಬಿಡುಗಡೆ ಮಾಡುತ್ತಿಲ್ಲ, ಕ್ಷೇತ್ರದ ಹಲವೆಡೆ ನೀರಿನ ಸಮಸ್ಯೆ ತೀವ್ರತೆ ಇದ್ದು ಸರ್ಕಾರದ ಗಮನಕ್ಕೆ ತಂದರೂ ಪ್ರಯೋಜನವಾಗುತ್ತಿಲ್ಲ ಸರ್ಕಾರದ ಧೋರಣೆ ಹೀಗೆ ಮುಂದುವರೆದರೆ ಅನಿವಾರ್ಯವಾಗಿ ಹೋರಾಟ
ಮಾಡಲಾಗುವುದು ಎಂದರು.
ಬಿಜೆಪಿ ಸರ್ಕಾರಲ್ಲಿ ಬೆಂಗಳೂರು ನಗರ ಅಭಿವೃದ್ಧಿಗೆಂದು ಸಾವಿರಾರು ಕೋಟಿ ಮೀಸಲಿಡುತ್ತಿತ್ತು .ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಅನುದಾನ ನೀಡುತ್ತಿಲ್ಲ ಎಂದು ಅಕ್ರೋಶ ವ್ಯಕ್ತ ಪಡಿಸಿದರು.
ಈ ಸಂಧರ್ಭದಲ್ಲಿ ಸಿಡೇದಹಳ್ಳಿ ಬಡಾವಣೆ ಸಂಘದ ಅಧ್ಯಕ್ಷ ಮುಕೇಶ್, ಸ್ಥಳೀಯರಾದ ಅಬ್ಬಿಗೆರೆ ಮಂಜುನಾಥ್ ಗೌಡ, ಮಂಜುನಾಥ್, ಸೋಲಮನ್ ರಾಜು, ಕಾಪು , ಮುಖಂಡರಾದ ಪಿ ಎಚ್ ರಾಜು, ರಘು ಸೂರ್ಯ, ಮಧುಸೂದನ್ ಮುಂತಾದವರು ಇದ್ದರು.