April 18, 2025

ಪಬ್ಲಿಕ್ ರೈಡ್ ನ್ಯೂಸ್ ಪೀಣ್ಯ ದಾಸರಹಳ್ಳಿ: ಪೀಣ್ಯ ಕೈಗಾರಿಕಾ ಪ್ರದೇಶದ ಎನ್ ಟಿ ಟಿ ಎಫ್ ಆವರಣದಲ್ಲಿ ಮಾರಾಟಗಾರರ ಅಭಿವೃದ್ಧಿ ಕಾರ್ಯಕ್ರಮ ಮತ್ತು ತಂತ್ರಜ್ಞಾನ ಪ್ರದರ್ಶನ ಹಾಗೂ ಪಿ ಐ ಎ ಎಕ್ಸ್ ಪೋ 2024ರ ಕಾರ್ಯಕ್ರಮವನ್ನು ಶಾಸಕ ಎಸ್. ಮುನಿರಾಜು ಉದ್ಘಾಟಿಸಿದರು.

ಪೀಣ್ಯ ಕೈಗಾರಿಕೆಗಳಲ್ಲಿ ಸಣ್ಣ ವಸ್ತುಗಳಿಂದ ಏರ್ಪೋರ್ಸ್ ಗೆ ಬೇಕಾಗುವ ವಸ್ತುಗಳು, ಎಚ್ಎಎಲ್, ಬಿಎಚ್ಇಎಲ್, ಹಾಗೂ ಬಿಇಎಲ್‌ ಸೇರಿದಂತೆ ಪ್ರತಿಷ್ಠಿತ ಕಂಪನಿಗಳಿಗೆ ಸರಬರಾಜು ಮಾಡುವ ಕಂಪನಿಗಳು ಪೀಣ್ಯ ಕೈಗಾರಿಕೆಗಳಲ್ಲಿ ಇವೆ ಎಂದು ಶಾಸಕ ಎಸ್.ಮುನಿರಾಜು ಕಾರ್ಯಕ್ರಮವನ್ನು ಕುರಿತು ಮಾತನಾಡಿದರು.

ಪಿ ಐ ಎ 2024 ಪೀಣ್ಯ ಕೈಗಾರಿಕಾ ಪ್ರದೇಶ ಮತ್ತು ನಿರ್ದಿಷ್ಟವಾಗಿ ಸುತ್ತಮುತ್ತಲಿನ ಕೈಗಾರಿಕೆಗಳ ಮತ್ತು ಸಣ್ಣ ಪ್ರಮಾಣದ ಉದ್ಯಮಿಗಳಿಗೆ ಹೊಸ ಅವಕಾಶವನ್ನು ಅನಾವರಣಗೊಳಿಸುತ್ತದೆ 2024 ವ್ಯಾಪಾರ ಅಭಿವೃದ್ಧಿ ಕಾರ್ಯಕ್ರಮ ಪ್ರದರ್ಶನ ತಾಂತ್ರಿಕ ಅಧಿವೇಶನಗಳು ಇರುವಂತಹ ಎಲ್ಲಾ ಕೈಗಾರಿಕೆ ಉತ್ಪನ್ನಗಳು ಈ ಕಾರ್ಯಕ್ರಮಕ್ಕೆ ಬಂದಿರುವುದು ಬಹಳ ಸಂತೋಷ. ರಾಷ್ಟ್ರೀಯ ಮಾರುಕಟ್ಟೆ ಏಜೆನ್ಸಿ ಮತ್ತು ಖಾಸಗಿ ಕೈಗಾರಿಕೆಗಳು ಭಾಗವಹಿಸಿದೆ. ಪೀಣ್ಯದಲ್ಲಿನ ಕೈಗಾರಿಕೆಗಳು ಮತ್ತು ದೊಡ್ಡ ಕಂಪನಿಗಳ ನಡುವಿನ ಹೆಚ್ಚಿನ ಮಾರಾಟಗಾರರ ಸಹಯೋಗಕ್ಕೆ ಕಾರಣವಾಗುತ್ತದೆ ಎಂದು ನಾನು ಭಾವಿಸುತ್ತೇವೆ. ಹೆಚ್ಚಿನ ಸಂಖ್ಯೆಯಲ್ಲಿ ಬೆಳೆಯುತ್ತಿರುವ ಮಹಿಳಾ ಉದ್ಯಮಿಗಳಿಗೂ ನಾವಿಲ್ಲಿ ವಿಶೇಷ ಉತ್ಪನ್ನ ನೀಡಿದ್ದೇವೆ 2024 ಉತ್ಪಾದನಾ ಕೈಗಾರಿಕೆಗಳಿಗೆ ತಮ್ಮ ಉತ್ಪನ್ನಗಳ ಸೇವೆಗಳನ್ನು ಪ್ರದರ್ಶಿಸಲು ಉತ್ತಮ ಅವಕಾಶವನ್ನು ಒದಗಿಸಿಕೊಟ್ಟಿದೆ.ಖಾಸಗಿ ಕಂಪನಿಗಳ ಅಗತ್ಯತೆಗಳ ಬಗ್ಗೆ ಉತ್ತಮ ತಿಳುವಳಿಕೆಯನ್ನು ನೀಡುತ್ತದೆ ಅವರನ್ನು ಪ್ರೋತ್ಸಾಹಿಸಲು ಮತ್ತು ಸಹಾಯ ಮಾಡುವ ದೃಷ್ಟಿಯಿಂದ ಈ ಒಂದು ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ನಾನು ಧನ್ಯವಾದಗಳು ಕೋರುತ್ತೇನೆ ಎಂದು ಪೀಣ್ಯ ಕೈಗಾರಿಕಾ ಸಂಘದ ಅಧ್ಯಕ್ಷ ಎಚ್ಎಂ.ಆರಿಫ್ ಮಾತನಾಡಿದರು.

ಈ ಕಾರ್ಯಕ್ರಮಕ್ಕೆ ಕೆಎಸ್ಎಸ್ಐಡಿ ಸಿ ವ್ಯವಸ್ಥಾಪಕ ನಿರ್ದೇಶಕ ಕುಮಾರ್ ಬಿಡಿಬಿಐ ಪ್ರಧಾನ ವ್ಯವಸ್ಥಾಪಕ ಎಸ್ ಎಸ್. ಶ್ರೀಪತಿ, ಎನ್ ಟಿ ಟಿ ಎಫ್ ವ್ಯವಸ್ಥಾಪಕ ನಿರ್ದೇಶಕ ಆರ್. ರಾಜಗೋಪಾಲನ್, ಎಚ್ಎಎಲ್ ನ ಪ್ರಧಾನ ವ್ಯವಸ್ಥಾಪಕ ಮಲ್ಲಿಕಾರ್ಜುನ್, ಕಾಸಿಯ ಅಧ್ಯಕ್ಷ ಸಿಎ.ಶಶಿಧರ್ ಶೆಟ್ಟಿ, ಖಜಂಚಿ ಮಲ್ಲೇಶ್ ಗೌಡ, ಪೀಣ್ಯ ಕೈಗಾರಿಕಾ ಸಂಘದ ಅಧ್ಯಕ್ಷ ಎಚ್.ಎಂ.ಆರಿಫ್, ಮಾಜಿ ಅಧ್ಯಕ್ಷ ಎಚ್. ಮಂಜುನಾಥ್, ಉಪಾಧ್ಯಕ್ಷ ಶಿವಕುಮಾರ್,ದಾನಪ್ಪ, ಚನ್ನಕೇಶವ, ಸೆಲ್ವಕುಮಾರ್, ರವಿಕುಮಾರ್, ಕಾರ್ಯದರ್ಶಿ ಯು.ಸತ್ಯನಾರಾಯಣ ಹಾಗೂ ಪೀಣ್ಯ ಕೈಗಾರಿಕಾ ಸಂಘದ ಸದಸ್ಯರು,ಉದ್ಯಮಿಗಳು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *

error: Content is protected !!