ಹುಬ್ಬಳ್ಳಿ ಅಂಜಲಿ ಹತ್ಯೆ ಪ್ರಕರಣ
ಇತ್ತೀಚೆಗಷ್ಟೆ ಅಂಜಲಿ ಅಂಬಿಗೆರ ಹತ್ಯೆ ಪ್ರಕರಣವನ್ನು ಸಿಐಡಿ ವರ್ಗಾಯಿಸಿರುವ ರಾಜ್ಯ ಸರ್ಕಾರ ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಕಿಮ್ಸ್ ಆಸ್ಪತ್ರೆಯಿಂದ ಕಳೆದ ದಿನವೆ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿರೋ ಸಿಐಡಿ, ವಿವಿಧ ಆಯಾಮಗಳಲ್ಲಿ ಗಿರೀಶ್ ನ ವಿಚಾರಣೆ ಮಾಡುತ್ತಿದೆ.
ತಡರಾತ್ರಿವರೆಗೂ ಕೊಲೆ ಆರೋಪಿ ಗಿರೀಶ್ ನ ವಿಚಾರಣೆ ಮಾಡಿದ ಸಿಐಡಿ ಅಧಿಕಾರಿಗಳು ಬೆಂಡಿಗೇರಿ ಪೊಲೀಸ್ ಠಾಣೆಯಿಂದ ನೇರವಾಗಿ ಹುಬ್ಬಳ್ಳಿ ನ್ಯಾಯಾಲಯಕ್ಕೆ ಕರೆದುಕೊಂಡು ಹೋಗಿದ್ದಾರೆ.
ಸಿಐಡಿ ಎಸ್ ಪಿ ವೆಂಕಟೇಶ ಹಾಗೂ ಡಿವೈಎಸ್ಪಿ ಉಮೇಶ ಅವರ ನೇತೃತ್ವದ ತಂಡವು ಹತ್ಯೆ ಪ್ರಕರಣದ ಕಾರ್ಯಚರಣೆಯನ್ನು ಆರಂಭಿಸಿದೆ.
ವರದಿ ಕಿರಣ ಬಳ್ಳಾರಿ ಹುಬ್ಬಳ್ಳಿ