
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಹುಚ್ಚವ್ವನಹಳ್ಳಿ ಗ್ರಾಮದಲ್ಲಿ ನಡೆದಿರುವ ಘಟನೆ, ಗ್ರಾಮಸ್ಮಶಾನಕ್ಕೆ ಪರ್ಯಾಯ ಮಾರ್ಗವಿಲ್ಲದೆ ಚಾನಲ್ ನೀರಿನಲ್ಲೇ ಶವ ಹೋಯ್ತೊಯ್ದ ಸಂಬಂಧಿಕರು.
ಗ್ರಾಮದ ತಿಪ್ಪೇಸ್ವಾಮಿ ಎಂಬ ವ್ಯಕ್ತಿ ಅಪಘಾತದಲ್ಲಿ ಮೃತಪಟ್ಟಿದ್ದು ಗುಯಿಲಾಳ್ ಬಳಿ ಬೈಕ್ ಅಪಘಾತದಲ್ಲಿ ಮೃತ ಪಟ್ಟಿದ್ದಾರೆ.
ಸ್ಮಶಾನಕ್ಕೆ ತೆರಳಲು ದಾರಿ ಕಲ್ಪಿಸದ ಹಿರಿಯೂರು ತಾಲ್ಲೂಕು ಆಡಳಿತ ಜೀವ ಕೈಯಲ್ಲಿಡಿದು ನಡು ನೀರಿನಲ್ಲೇ ಶವ ಹೊತ್ತೋಯ್ದ ಸಂಬಂಧಿಕರು. ಮಳೆಯಿಂದ ವಿವಿ ಸಾಗರ ಚಾನಲ್ ನೀರು ಹರಿಯುವಾಗ ಈ ಸಮಸ್ಯೆ ಕಂಡುಬಂದಿದೆ.
1.5 ಎಕರೆ ಸ್ಮಾಶಾನ ನೀಡಿರುವ ತಾಲ್ಲೂಕು ಆಡಳಿತ ರಸ್ತೆ ಹಾಗೂ ಸೇತುವೆ ವ್ಯವಸ್ಥೆಯನ್ನು ಕಲ್ಪಿಸಿರುವುದಿಲ್ಲ. ತಾಲ್ಲೂಕು ಆಡಳಿತದ ವಿರುದ್ದ ಗ್ರಾಮಸ್ಥರ ಆಕ್ರೋಶಗೊಂಡಿದ್ದು. ಶವ ಸಂಸ್ಕಾರಕ್ಕೆ ತೆರಳಿದ್ದಾಗ ಓರ್ವನ ಕೈ ಮುರಿದಿದೆ ಎಂದು ಕೂಡ ಆರೋಪ ಕೇಳಿಬಂದಿದೆ.
ಈ ವೇಳೆ ಆಕ್ರೋಶಗೊಂಡ ಜನರು ದಾರಿ ವ್ಯವಸ್ಥೆ ಕಲ್ಪಿಸದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ
(ವರದಿ…ಲಿಂಗಮಯ್ಯ ಆರ್ ಎನ್ ಪಾವಗಡ)