April 18, 2025

ಪಬ್ಲಿಕ್ ರೈಡ್ ನ್ಯೂಸ್ ಪಾವಗಡ : ಕಾನೂನು ಬಾಹಿರವಾಗಿ ಅವಧಿ ಮುಗಿದ ಕ್ರಿಮಿನಾಶಕಗಳ ಮಾರಾಟ ಕೃಷಿ ಇಲಾಖೆಯ ಎಡಿ ದಿಢೀರ್ ಭೇಟಿ ನೀಡಿ ಅಂಗಡಿ ಪರಿಶೀಲಿಸಿ ನೋಟೀಸ್ ನೀಡಿದ ಘಟನೆ ಶನಿವಾರ ಮಧ್ಯಾಹ್ನದ ಸಮಯದಲ್ಲಿ ನಡೆದಿದೆ.

ಪಾವಗಡ ತಾಲೂಕಿನ ದೊಡ್ಡಹಳ್ಳಿ ಗ್ರಾಮದಲ್ಲಿನ ಎಸ್‌ಎಲ್‌ಎನ್ ಟ್ರೇರ‍್ಸ್ ಗೋಬ್ಬರದ ಅಂಗಡಿಯಲ್ಲಿ ಆವದಿ ಮುಗಿದಾ ಕ್ರಿಮಿನಾಶಕಗಳ ಮಾರಾಟ, ಜಿಎಸ್‌ಟಿ ಬಿಲ್ ಹಾಗೂ ಗೋಬ್ಬರದ ಅಂಗಡಿಯ ಹೆಸರು ಕೂಡ ಅಂಗಡಿಗೆ ಬರೆಸದೇ, ಅಂಗಡಿಯ ಶೀಲ್ ಇರುವ ರಶೀದಿ ನೀಡದೆ ಆಕ್ರಮವಾಗಿ ಗೋಬ್ಬರಗಳು ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದು ದೀಡಿರನೆ ಅಂಗಡಿಗೆ ಬೇಟಿ ನೀಡಿದ ಕೃಷಿ ಇಲಾಖೆಯ ಎಡಿ ಅಜಯ್‌ಕುಮಾರ್ ಅಂಗಡಿ ಪರಿಶೀಲಿಸಿ ನೋಟಿಸ್ ನೀಡಿದ ಘಟನೆ ನಡೆದಿದೆ.

ಅಂಗಡಿ ಪರಿಶೀಲನಾ ಸಮಯದಲ್ಲಿ ಅವಧಿ ಮುಗಿದಾ ಕ್ರಿಮಿನಾಶಕಗಳ ಮಾರಾಟ ಮಾಡುತ್ತಿರುವ ಹಾಗೂ ಅಂಗಡಿಯಲ್ಲಿರುವುದು ಕಂಡು ಬಂದಿದೆ, ಅಲ್ಲದೆ ಸ್ಥಳೀಯರು ಕೂಡ ತಾಲೂಕು ಹಾಗೂ ಜಿಲ್ಲಾ ಕೃಷಿ ಇಲಾಖೆಯ ಹೆಸರನ್ನು ಬಳಸಿಕೊಂಡು ಸಭೆ ಇದೇ ಎಂದು ಹೆಂಗಸರನ್ನು ಕರೆದುಕೊಂಡು ಹೊಗುತ್ತಿರುವ ಬಗ್ಗೆ ಮಾಹಿತಿ ನೀಡಿದ್ದು, ಅಲ್ಲದೆ ಇಲಾಖೆಯ ಹೆಸರನ್ನು ದುರುಪಯೋಗ ಪಡಿಸಿಕೊಂಡು ಮಹಿಳೆ ಕರೆದುಕೊಂಡು ಹೊದಾಗ ಅಪಘಾತ ಅಥವಾ ಇನ್ನೆನಾದರು ಸಮಸ್ಯೆ ಎದುರಾದಲ್ಲಿ ಇದಕ್ಕೆ ಯಾರು ಹೋಣೆ ಎಂದಾಗ ಅಂತಹ ಘಟನೆಗಳು ಕಂಡು ಬಂದಾಗ ತಕ್ಷಣ ಪೋಲಿಸ್ ಇಲಾಖೆಗೆ ಮಾಹಿತಿ ನೀಡಿ ಎಂದು ಎಡಿ ಅಜಯ್‌ಕುಮಾರ್ ತಿಳಿಸಿದ್ದಾರೆ.

ಗ್ರಾಮಸ್ಥರ ಆಕ್ರೋಶ : ಕರ್ನಾಟಕದಲ್ಲಿ ನಿಷೇಧಿಸಿರುವ ಹಾಗೂ ಮಾರಾಟದ ಅನುಮತಿಯಿಲ್ಲದ ಹಾಗೂ ಆವದಿ ಮುಗಿದ ಕ್ರಿಮಿನಾಶಕಗಳು ನಿರಂತರವಾಗಿ ಇಲ್ಲಿ ಮಾರಾಟ ಮಾಡುತ್ತಿರುವ ಬಗ್ಗೆ ತಾಲೂಕು, ಜಿಲ್ಲಾ ಮಟ್ಟದ ಹಾಗೂ ವಿಜಿಲೆನ್ಸ್ ಅಧಿಕಾರಿಗಳಿಗೆ ಮಾಹಿತಿ ನೀಡಿದರು ಇದುವರೆಗೂ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಕಿಡಿಕಾರಿದರು.

ಇದೇ ವೇಳೆ ಎಡಿ ಅಜಯ್‌ಕುಮಾರ್ ಮಾತನಾಡಿ ಆವದಿ ಮುಗಿದ ಕ್ರಿಮಿನಾಶಕಗಳು ಮಾರಾಟ ಮತ್ತು ಖರೀದಿ ಮಾಡುವ ರೈತರಿಗೆ ಜಿಎಸ್‌ಟಿ ಬಿಲ್ ನೀಡಬೇಕು, ಹಾಗೂ ಮಹಿಳೆಯರ ಬಗ್ಗೆ ಮಾಹಿತಿ ನನ್ನ ಗಮನಕ್ಕೆ ಬಂದಿದೆ, ಸುಖಾಸುಮ್ಮನೆ ಇಲಾಖೆ ಹೆಸರು ಬಳಸಿಕೊಂಡರೆ ನಿದಾಕ್ಷೀಣ್ಯ ಕ್ರಮ ತಪ್ಪಿದ್ದಲ್ಲ ಜೋತೆಗೆ ಪೋಲಿಸ್ ಠಾಣೆಗೆ ದೂರು ನೀಡುವಂತೆ ಸೂಚಿಸಿದರು.

(ವರದಿ.. ಲಿಂಗಮಯ್ಯ ಆರ್ ಎನ್ ಪಾವಗಡ)

Leave a Reply

Your email address will not be published. Required fields are marked *

error: Content is protected !!