
ಪಬ್ಲಿಕ್ ರೈಡ್ ನ್ಯೂಸ್ ಪೀಣ್ಯ ದಾಸರಹಳ್ಳಿ
ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಚಿಕ್ಕಬಾಣಾವರದ ಪೂಜಶ್ರೀ ಚಿಕ್ಕಣ್ಣ ಅವರು ಕೇರಳ ರಾಜ್ಯದ ಕೋಝೀಕೋಡಿನಲ್ಲಿ ಮೇ 24 ರಿಂದ 26 ರ ವರೆಗೆ ನಡೆದ 19ನೇ ಸೌತ್ ಮತ್ತು ವೆಸ್ಟ್ ಇಂಡಿಯಾ ಟೈಕೊಂಡ ಐ ಟಿ ಎಫ್ ಚಾಂಪಿಯನ್ಶಿಪ್ ನಲ್ಲಿ ಕೋಚರ್ ನವೀನ್ ರಾಜ್ ಅವರ ಮಾರ್ಗದರ್ಶನದಲ್ಲಿ ಬ್ಲೂಬೆಲ್ಟ್ ವಿಭಾಗದಿಂದ 14 ರಿಂದ 18 ವರ್ಷ ವಯೋಮಿತಿಯಲ್ಲಿ ವೈಯಕ್ತಿಕ ಸ್ಪಾರಿಂಗ್ ನಲ್ಲಿ ಮೊದಲನೇ ಸ್ಥಾನ ಚಿನ್ನದ ಪದಕ ಪಡೆದು ಮತ್ತು ಗ್ರೂಪ್ ಪ್ಯಾಟರ್ನ್ಸ್ ನಲ್ಲಿ ಮೊದಲನೇ ಸ್ಥಾನ ಚಿನ್ನದ ಪದಕ ಪಡೆದು ಒಟ್ಟು ಎರಡು ಚಿನ್ನದ ಪದಕಗಳನ್ನು ಪಡೆದುಕೊಂಡಿದ್ದಾರೆ.