
ಪಬ್ಲಿಕ್ ರೈಡ್ ನ್ಯೂಸ್ :ಧಾರವಾಡ ಜಿಲ್ಲೆಯಲ್ಲಿ ಸಂಘಟನೆ ವಿಸ್ತರಿಸುವ ಸಲುವಾಗಿ ಹಾಗೂ ವಿವಿಧ ಘಟಕಗಳ ರಚನೆ ಮಾಡಿ ಜಿಲ್ಲೆಯಲ್ಲಿ ಎಲ್ಲಾ ವರ್ಗಗಳನ್ನು ಒಂದುಗೂಡಿಸುವ ಮೂಲಕ ಸಂಘಟನೆಯನ್ನು ಜಿಲ್ಲೆಯಲ್ಲಿ ಬಲಪಡಿಸುವುದರ ಮೂಲಕ ಸಮಾಜದಲ್ಲಿ ನಡೆಯುವ ಅನ್ಯಾಯ,ದೌರ್ಜನ್ಯಗಳ ಹಾಗೂ ಭ್ರಷ್ಟಾಚಾರದ ವಿರುದ್ಧ ಹೋರಾಟಕ್ಕೆ ಇಳಿಯುವಂತೆ ಕರೆ ನೀಡಲಾಯಿತು.
ಈ ಸಭೆಯಲ್ಲಿ ರಾಜ್ಯಾಧ್ಯಕ್ಷರಾದ ಮಹೇಶ್ ಕುಮಾರ್, ರಾಜ್ಯ ಉಪಾಧ್ಯಕ್ಷರಾದ ದೇವರಾಜ್, ಪಾಟೀಲ್, ಮುದಕನಗೌಡ,ಹನುಮಂತಣ್ಣ,ಜಿಲ್ಲಾ ಅಧ್ಯಕ್ಷ ಅನಿಲ್, ಮಂಜುನಾಥ್, ತಾಲ್ಲೂಕು ಮಹಿಳಾ ಘಟಕದ ಅಧ್ಯಕ್ಷೆ ಮಂಜುಳಾ, ನೀಲಮ್ಮಾ, ಲಕ್ಷ್ಮಿ, ಯಶೋದ, ಅಶೋಕ್, ಜಯಚಂದ್ರ, ಹುಸೇನ್, ಬಸವರಾಜು ಸೇರಿದಂತೆ ಜಿಲ್ಲೆಯ ಸದ್ಯಸ್ಯರು ಪದಾಧಿಕಾರಿಗಳು ಪಾಲ್ಗೊಂಡಿದ್ದರು.