
ಬೆಳಗಾವಿ
ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಪಾನಶಾಪ ಅಂಗಡಿ ಸಂಪೂರ್ಣ ಭಸ್ಮವಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಕಣಗಲಾ ಗ್ರಾಮದ ಬಸವ ಸರ್ಕಲನಲ್ಲಿರುವ ಜಗದಂಬಾ ಪಾನ ಶಾಪ ಅಂಗಡಿಯಲ್ಲಿ ನಡೆದಿದೆ. ಬೆಂಕಿಯ ಕೆನ್ನಾಲಿಗೆಗೆ ಇಡೀ ಪಾನ ಶಾಪ ಅಂಗಡಿ ಸುಟ್ಟು ಕರಕಲಾಗಿದೆ. ಮಂಗಳವಾರ ಇಂದು ಮುಂಜಾನೆ 04 ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ವಿದ್ಯುತ್ ತಂತಿಯ ಶಾರ್ಟ್ ಸರ್ಕ್ಯೂಟ್ ಆಗಿ ಅದರ ಬೆಂಕಿ ಕಿಡಿ ಅಂಗಡಿಗೆ ತಗುಲಿದ್ದೇ ಬೆಂಕಿ ಅವಘಡ ಸಂಭವಿಸಲು ಪ್ರಮುಖ ಕಾರಣವಾಗಿದೆ ಎಂದು ಹೇಳಲಾಗಿದೆ. ಈ ಘಟನೆಯಿಂದ ಸುಮಾರು 04 ಲಕ್ಷರೂ.ಗೂ ಹೆಚ್ಚು ಮೌಲ್ಯದ ಸ್ವತ್ತು ಸುಟ್ಟು ಹೋಗಿರುವುದಾಗಿ ಅಂಗಡಿಯ ಮಾಲಿಕರಾದ ಶ್ರೀ ತುಕಾರಾಮ ಗೊಂಧಳಿ ಇವರು ಮಾಹಿತಿ ನೀಡಿದರು.
*ವರದಿಗಾರರು:ಸಂತೋಷ ನಿರ್ಮಲೆ*