April 18, 2025

ಪಬ್ಲಿಕ್ ರೈಡ್ ನ್ಯೂಸ್ ನೆಲಮಂಗಲ:ಸುಮಾರು ದಿನಗಳಿಂದ ಸರಿಯಾಗಿ ನೀರು ಬಿಡದೆ ಸಾರ್ವಜನಿಕರು ನೀರಿಗಾಗಿ ಪರಿತಪಿಸುವಂತ ಪರಿಸ್ಥಿತಿ ಎದುರಾಗಿದ್ದು ವಾಟರ್ ಮ್ಯಾನ್ ದುರ್ವರ್ತನೆಗೆ ಬೇಸತ್ತ ಸಾರ್ವಜನಿಕರು ನಗರಸಭೆ ಮುಂಭಾಗ ಪ್ರತಿಭಟನೆ ನಡೆಸಿದರು.

ನಗರಸಭೆ ವ್ಯಾಪ್ತಿಗೆ ಬರುವ ಜಕ್ಕಸಂದ್ರ, ಶಿವನಗರ, ಶ್ರೀನಿಧಿ ಬಡಾವಣೆ, ಶ್ರೀ ಕೃಷ್ಣ ಲೇಔಟ್, ರಾಜೇಂದ್ರ ನಗರ, ಗ್ರಾಮದ ನಿವಾಸಿಗಳು ಆರು ತಿಂಗಳಿಂದ ನೀರಿಗಾಗಿ ಪರಿತಪ್ಪಿಸುತ್ತಿದ್ದು ಅಧಿಕಾರಿಗಳಿಗೆ ಮನವಿ ಮಾಡಿದರು ಯಾವುದೇ ಪ್ರಯೋಜನವಾಗಿಲ್ಲ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡದೆ ಕಂಡರೂ ಕಾಣದಂತೆ ಕುರುಡುತನ ತೋರುತ್ತಿದ್ದು ಇಲ್ಲಿ ವಾಟರ್ ಮ್ಯಾನ್ ಅದೇ ದರ್ಬಾರ್ ಆಗಿದೆ ದುಡ್ಡು ಕೊಟ್ಟವರಿಗೆ ಮಾತ್ರ ನೀರು ಬಿಡುತ್ತಾನೆ ಕೇಳಲು ಹೋದರೆ ಸಿದ್ದರಾಮಯ್ಯ 2000 ಕೊಟ್ಟಿಲ್ವಾ ಅದನ್ನು ಕೊಟ್ಟು ನೀರು ಬಿಡಿಸಿಕೊ ಎಂದು ಬೇಜವಾಬ್ದಾರಿತನದಿಂದ ವರ್ತಿಸುತ್ತಿದ್ದಾನೆ ಅವನನ್ನು ಕೂಡಲೇ ಅಮಾನತ್ತು ಗೊಳಿಸಿ ನೀರಿನ ಸಮಸ್ಯೆ ಬಗೆಹರಿಸಬೇಕೆಂದು ಮಹಿಳೆಯರು ಸೇರಿದಂತೆ ಗ್ರಾಮದ ನಿವಾಸಿಗಳು ನೂರಾರು ಜನಸಂಖ್ಯೆಯಲ್ಲಿ ಭಾಗವಹಿಸಿ ನಗರಸಭೆ ಮುಂಭಾಗ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಮುಖಂಡ ಕೇಶವಮೂರ್ತಿ ಮಾತನಾಡಿ ಸರಿಯಾದ ಸಮಯಕ್ಕೆ ಕಂದಾಯ ಕಟ್ಟದಿದ್ದಲ್ಲಿ ಫೈನ್ ಹಾಕುವ ನಗರಸಭೆ ಅಧಿಕಾರಿಗಳು ಮೂಲಭೂತ ಸೌಕರ್ಯ ಕೊಡುವಲ್ಲಿ ವಿಫಲರಾಗಿದ್ದಾರೆ ನಮ್ಮ ಊರಿಗೆ ನಿಗದಿಯಾದ ಬೋರ್ವೆಲ್ ಗಳನ್ನು ಕೊರೆಯದೆ ಅಧಿಕಾರಿಗಳು ನಿರ್ಲಕ್ಷ ತೋರುತ್ತಿದ್ದು ಅವರ ಬೇಜವಾಬ್ದಾರಿತನಕ್ಕೆ ಇವತ್ತು ಸಾರ್ವಜನಿಕರು ನೀರಿಗಾಗಿ ಪರದಾಡುವಂತ ಪರಿಸ್ಥಿತಿ ಎದುರಾಗಿದೆ ಐದು ವರ್ಷದಿಂದ ನಮ್ಮ ಊರಿಗೆ ಯಾವುದೇ ಅನುದಾನ ಬಂದಿಲ್ಲ ಒಂದು ಕೆಲಸವೂ ಮಾಡಿಲ್ಲ ಆಕ್ಷನ್ ಪ್ಲಾನ್ ಕೇಳಿದರೆ ಕೊಡದೆ ನಿರ್ಲಕ್ಷ ತೋರಿ ಹೆಚ್ಚುವರಿ ಸದಸ್ಯರನ್ನು ಕೇಳಿಕೊಳ್ಳಿ ಎಂದು ಬೇಜವಾಬ್ದಾರಿತನದಿಂದ ಉತ್ತರ ನೀಡುತ್ತಾರೆ ನಮ್ಮ ಊರಿನ ನೀರಿನ ಸಮಸ್ಯೆ ಬಗೆಹರಿಯದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತ ಮನುಕುಮಾರ್ ಮಾತನಾಡಿ ಕಳೆದ ಎರಡು ತಿಂಗಳುಗಳಿಂದ ಬೇಸಿಗೆಯ ಅಭಾವದಿಂದ ಕೊಳವೆ ಬಾವಿಗಳು ಡ್ರೈ ಆಗಿದ್ದ ಕಾರಣ ನೀರಿನ ಸಮಸ್ಯೆ ಯಾಗಿತ್ತು ಈಗಾಗಲೇ ಪಾಯಿಂಟ್ ಗುರುತಿಸಿದ್ದು ಕೊಳವೆಬಾವಿ ಕೊರೆಸಿ ನೀರಿನ ಸಮಸ್ಯೆ ಬಗೆಹರಿಸಲಾಗುವುದು ಹೆಚ್ಚು ಸಮಸ್ಯೆ ಇರುವ ಕಡೆ ಟ್ಯಾಂಕರ್ ಮೂಲಕ ನೀರಿನ ವ್ಯವಸ್ಥೆ ಮಾಡಲಾಗುವುದು ವಾಟರ್ ಮ್ಯಾನ್ ಬದಲಾವಣೆ ಮಾಡಿ ಅತ್ಯುತ್ತಮವಾಗಿ ಕೆಲಸ ಮಾಡುವಂತಹ ವ್ಯಕ್ತಿಯನ್ನು ಕೊಡುವಂತ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.

ವಿಕಾಸ್ ನೆಲಮಂಗಲ ವರದಿಗಾರರು

Leave a Reply

Your email address will not be published. Required fields are marked *

error: Content is protected !!