
ಅತಿ ಕಿರಿಯ ವಯಸ್ಸಿನಲ್ಲೇ ಸ್ವಿಮಿಂಗ್ ಮಾಡುವ ಮೂಲಕ ಟಾಪ್ ಒನ್ ಸಾಲಿನಲ್ಲಿ ಗುರ್ತಿಸಿಕೊಂಡ ಅಗಸ್ತ್ಯ
ಕೊಪ್ಪಳ : ನಗರದ ಬಾಲ ಪ್ರತಿಭೆ ಅಗಸ್ತ್ಯ ಮೂರು ವರ್ಷ ವಯಸ್ಸಿನಲ್ಲೇ ಸ್ವಿಮ್ಮಿಂಗ್ ಪರಿಪೂರ್ಣ ಕಲಿಯುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಗುರ್ತಿಸಿಕೊಂಡ ಅಗಸ್ತ್ಯನ ಸ್ವಿಮ್ಮಿಂಗ್ ಎಲ್ಲರನ್ನೂ ಆಶ್ಚರ್ಯ ಗೊಳಿಸಿದೆ
ಮಕ್ಕಳಲ್ಲಿರೋ ಪ್ರತಿಬಿಯನ್ನು ಹೊರ ತರುವಲ್ಲಿ ಸದಾ ಕ್ರಿಯಾತ್ಮಕವಾಗಿ ಕಾರ್ಯನಿರ್ವಹಿಸಿದ ರಾಘವೇಂದ್ರ ಅರಕೇರಿ ಅವರು ಇಂದು ತಮ್ಮ ಮಗನಿಗೆ ಸಕಲ ಕಲಾ ವಲ್ಲಭ ಮಾಡಬೇಕೆಂಬ ಹಂಬಲ ಹೊತ್ತು ಒಂದು ವರ್ಷ ವಯಸ್ಸಿನಲ್ಲೇ ಕರಾಟೆ ಡ್ಯಾನ್ಸ್ ಸ್ಕೇಟಿಂಗ್ ಯೋಗ ಸ್ವಿಮ್ಮಿಂಗ್ ಆಕ್ಟಿಂಗ್ ಹೀಗೆ ಹಲವಾರು ರಂಗದಲ್ಲಿ ಅಗಸ್ತ್ಯನ ಪ್ರತಿಭೆ ಗುರುತಿಸುವಲ್ಲಿ ಯಶಸ್ವಿಯಾಗಿದ್ದಾರೆ .
ಅಗಸ್ತೆ ಸ್ವಿಮಿಂಗ್ ಅಕಾಡಕ್ಕೆ ಇಳಿದರೆ ಆ ಪುಟ್ಟ ಪೋರನ ಸ್ವಿಮಿಂಗ್ ನೋಡಲು ಎರಡು ಕಣ್ಣು ಸಾಲದು ಎನ್ನುವ ರೀತಿಯಲ್ಲಿ ಸ್ವಿಮಿಂಗ್ ಮಾಡುವ ಮೂಲಕ ಎಲ್ಲರನ್ನೂ ಆಶ್ಚರ್ಯ ಗೊಳಿಸಿದ್ದಾನೆ .
ಈ ಪ್ರಪಂಚದಲ್ಲಿ ತಂದೆಗಿಂತ ದೊಡ್ಡ ಗುರು ಇನ್ನೊಬ್ಬ ಇಲ್ಲ ಎಂಬುದನ್ನ ರಾಘವೇಂದ್ರ ಅರಿಕೇರಿ ಅವರು ಪೂರ್ಣಗೊಳಿಸಿದ್ದಾರೆ ಅಗಸ್ತ್ಯನನ್ನು ಎಲ್ಲ ರಂಗದಲ್ಲಿ ಗುರುತಿಸುವ ಮೂಲಕ ಇಂದು ಕರ್ನಾಟಕದ ಕಿರೀಟನಾಗಿ ಹೊರಹಮ್ಮಿದ್ದಾನೆ ಎಂಬುದು ಹೆಮ್ಮೆಯ ಸಂಗತಿ ಅಗಸ್ತ್ಯನ ಪ್ರತಿಭೆ ಇತರರಿಗೆ ಮಾದರಿಯಾಗಲಿ ಎಂದು ಕ್ರೀಡಾ ಅಭಿಮಾನಿಗಳು ಶುಭ ಹಾರೈಸಿದ್ದಾರೆ .