
ಪಬ್ಲಿಕ್ ರೈಡ್ ನ್ಯೂಸ್
ಯಶವಂತಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ತಾವರೆಕೆರೆ ಹೋಬಳಿ ಪುಣಗ ಮಾರನಹಳ್ಳಿ ಶ್ರೀ ಶ್ರೀ ಕುಣಿಗಲ್ ಅಮ್ಮ ದೇವಿಯ ವಿಶೇಷ ಜಾತ್ರೆಯನ್ನು ಗ್ರಾಮದ 33 ಹಳ್ಳಿಗಳ ಸಮ್ಮುಖದಲ್ಲಿ ಜಾತ್ರಾ ಮಹೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು ವಿಶೇಷ ಕೊಂಡವನ್ನು ಭಕ್ತಿಯಿಂದ ಉಪವಾಸವಿದ್ದು ಪುರುಷರು ಹಾಗೂ ಮಹಿಳೆಯರು ಕೊಂಡ ಆಯುತ್ತಾರೆ. ತಾಯಿಯ ಮೆರವಣಿಗೆ ಡೊಳ್ಳು ಕುಣಿತ ಕೀಲುಗೊಂಬೆ ತಮಟೆ ವಾದ್ಯ ಮಹಿಳೆಯರು ಆರತಿ ಹೊತ್ತಿ ಮೆರವಣಿಗೆ ಮಾಡಿಕೊಂಡು ಬರುತ್ತಾರೆ, ವಿಶೇಷವೇನೆಂದರೆ ದೊಡ್ಡ ಆಲದ ಮರದ 400 ವರ್ಷ ಇತಿಹಾಸವುಳ್ಳ ಗುರುವಾರ ಜಾತ್ರಾ ಮಹೋತ್ಸವ ನಡೆಯುತ್ತದೆ, ಕಾರ್ಯಕ್ರಮ ಶ್ರೀ ಶ್ರೀ ಮುನೇಶ್ವರ ಸ್ವಾಮಿ ವಿಶೇಷ ಪೂಜೆ ಮಾಡಲಾಗುತ್ತದೆ. ಗಣಪತಿಹಳ್ಳಿಯ ಹಿರಿಯರಾದ ರೇಣುಕಯ್ಯ ಪುಟ್ಟಸ್ವಾಮಿ, ಮಾರಗೊಂಡನಹಳ್ಳಿ ಶ್ರೀ ನಾಗಣ್ಣ ಚುಂಚನಗುಪ್ಪೆ ಸದಸ್ಯರಾದ ಸುಕುಮಾರ್ ರುದ್ರ ಪ್ರಕಾಶ್ ಅರ್ಚಕರಾದ ರಾಜಕುಮಾರ್ ಮುದ್ದನ ಪಾಳ್ಯದ ಹೀರಾ ಮಗ 33 ಹಳ್ಳಿಯ ಗ್ರಾಮಸ್ಥರು ಕುಣಿಗಲ್ ಅಮ್ಮ ದೇವಿ ಟ್ರಸ್ಟ್ ಆಡಳಿತ ಮಂಡಳಿಯ ಎಲ್ಲಾ ಸೇವಕರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.