
ಪಬ್ಲಿಕ್ ರೈಡ್ ನ್ಯೂಸ್ ಬೆಳಗಾವಿ
ಬೆಳಗಾವಿ ಜಿಲ್ಲೆ ಲಿಂಗಾಯತ ಪಂಚಮಸಾಲಿ ಸಂಘಟನೆಗೆ ಬೆಳಗಾವಿ ಮುಂಚೂಣಿ ಜಿಲ್ಲೆ ಪಂಚಮಸಾಲಿ ಲಿಂಗಾಯತ ಸಮಾಜವನ್ನು ಘಟ್ಟಿಗೊಳಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಲಿಂಗಾಯತ ಪಂಚಮಸಾಲಿ ಸಮಾಜದ ಬೆಳಗಾವಿ ಜಿಲ್ಲಾ ಪತ್ರಿಕಾ ಮಾಧ್ಯಮದ ವಕ್ತಾರರನ್ನಾಗಿ ನಮ್ಮ ಸಮಾಜದವರೇಯಾದ ಶ್ರೀ ರಾಮಗೌಡ ಬಾಳಗೌಡ ಪಾಟೀಲ್ ಅವರನ್ನು ನೂತನವಾಗಿ ನೇಮಕ ಮಾಡಲಾಯಿತು.
ಅದೇ ರೀತಿ ಲಿಂಗಾಯತ ಪಂಚಮಸಾಲಿ ಸಮಾಜದ ಹುಕ್ಕೇರಿ ತಾಲೂಕ ಅಧ್ಯಕ್ಷರನ್ನಾಗಿ ಶ್ರೀ ಭೀಮಪ್ಪ ದುಂಡಪ್ಪ ಚೌಗಲಾ ಅವರನ್ನು ನೇಮಕ ಮಾಡಲಾಯಿತು.
ಈ ಸಂದರ್ಭದಲ್ಲಿ ಪೂಜ್ಯರಾದ ಕೂಡಲಸಂಗಮದ ಜಗದ್ಗುರು ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಮಾಜಿ ಸಚಿವ ಎ ಬಿ ಪಾಟೀಲ್, ಶಾಸಕ ವಿಜಯಾನಂದ ಕಾಶಪ್ಪನವರ್, ಬೆಳಗಾವಿ ಜಿಲ್ಲಾ ಅಧ್ಯಕ್ಷ ಆರ್ ಕೆ ಪಾಟೀಲ್ ಜಿಲ್ಲಾ ಗೌರವ ಅಧ್ಯಕ್ಷ ವಿಜಯ ರವದಿ, ಯುವ ಘಟಕದ ಅಧ್ಯಕ್ಷ ಗುಂಡು ಪಾಟೀಲ್ ಸೇರಿದಂತೆ ಸಮಾಜದ ಹಿರಿಯರು ಅಖಿಲ ಭಾರತ ಲಿಂಗಾಯತ ಮಹಾಸಭಾ ಮತ್ತು ಕರ್ನಾಟಕ ರಾಜ್ಯದ ಲಿಂಗಾಯತ ಪಂಚಮಸಾಲಿಯ ಸಮಾಜದ ಗುರು ಹಿರಿಯರು ಯುವಕರು ಸಮ್ಮುಖದಲ್ಲಿ ಹುಕ್ಕೇರಿಯ ರವದಿ ಫಾರ್ಮ್ ಹೌಸ್ ನಲ್ಲಿ ಈ ಕಾರ್ಯಕ್ರಮವು ನಡೆಯಿತು.
ವರದಿಗಾರರು ಸಂತೋಷ್ ನಿರ್ಮಲೆ.