
Public Ride News Pavagada
ಪಾವಗಡ
ಏಷ್ಯಾ ಖಂಡದಲ್ಲಿಯೇ ಅತಿ ದೊಡ್ಡ ಸೋಲಾರ್ ಪಾರ್ಕನ್ನು ಹೊಂದಿರುವಂತ ಪಾವಗಡದಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ತಾಪಮಾನ ಜಾಸ್ತಿ ಆಗಿರುತ್ತಾ ಬಂದಿರುತ್ತದೆ. ಇಲ್ಲಿ ಬಂದು ಹೋಗೋ ಸಾವಿರಾರು ಪ್ರಯಾಣಿಕರಿಗೆ ಕನಿಷ್ಠ ಮೌಲ್ಯ ಸೌಕರ್ಯಗಳಲ್ಲಿ ಒಂದಾದ ನೀರಿನ ವ್ಯವಸ್ಥೆಯೆ ಇಲ್ಲ.
ದಿನಕ್ಕೆ ಸಾವಿರಾರು ಪ್ರಯಾಣಿಕರು ಬಂದು ಹೋಗ್ತಾ ಇರುವಂತಹ ಪಾವಗಡ ಬಸ್ ನಿಲ್ದಾಣದಲ್ಲಿ ಕನಿಷ್ಠ ಮೂಲ ಸೌಕರ್ಯಗಳಲ್ಲಿ ಒಂದಾದ ನೀರಿನ ವ್ಯವಸ್ಥೆ ಇರಲ್ಲ ಅಂತ ಪಾವಗಡ ವಿದ್ಯಾರ್ಥಿಗಳು ಹಾಗೂ ಪ್ರಯಾಣಿಕರು ಹೇಳಿದ್ದಾರೆ. ಕುಡಿಯುವ ನೀರಿನ ಟ್ಯಾಂಕರ್ ವ್ಯವಸ್ಥೆ ಇದ್ದರೂ ಕೂಡ ಇದಕ್ಕೆ ಸಂಬಂಧಪಟ್ಟಂತೆ ಯಾವುದೇ ಅಧಿಕಾರಿಗಳ ನೀರಿನ ವ್ಯವಸ್ಥೆಯನ್ನು ಮಾಡಿರುವುದಿಲ್ಲ ಅಂತ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ರೀತಿಯ ನೀರಿನ ಕೊರತೆಯಿಂದ ಸಾರ್ವಜನಿಕರು ದುಡ್ಡು ಕೊಟ್ಟು ನೀರಿನ ಬಾಟಲಿ ಖರೀದಿ ಮಾಡಿ ತಮ್ಮ ದಣಿವನ್ನು ಆರಿಸಿಕೊಳ್ಳುವಂತೆ ಆಗಿದೆ. ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸಿ ಜನರಿಗೆ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಡಿಕೊಡುತ್ತಾರಾ? ಎಂದು ಕಾದು ನೋಡಬೇಕಾಗಿದೆ.
(ವರದಿ ಲಿಂಗಮಯ್ಯ ಆರ್ ಎನ್ .ಪಾವಗಡ.)