
ಹುಬ್ಬಳ್ಳಿ
ಕಸಬಾ ಪೇಟ ಠಾಣೆ ವ್ಯಾಪ್ತಿಯ ಇಸ್ಲಾಂಪುರ ಹಿಂದಿನ ಗದಗಕರ ಲೇಔಟ್ ನ ಮನೆಯಲ್ಲಿ ಇಲ್ಲದೆ ಇರುವುದನ್ನು ಗಮನಿಸಿ ಮನೆಯ ಬಾಗಿಲು ಮುರಿದು ಒಳಗಡೆ ಪ್ರವೇಶ ಮಾಡಿ ಮನೆಯಲ್ಲಿದ್ದ ಒಟ್ಟು 194 ಗ್ರಾಂ ಬಂಗಾರದ ಆಭರಣಗಳನ್ನು ಕಳ್ಳತನ ಮಾಡಿ ಎಸ್ಕೇಪ್ ಆಗಿದ್ದ ಪ್ರಕರಣವನ್ನು ದಾಖಲಿಸಿಕೊಂಡ ಕಸಬಾ ಪೇಟ ಠಾಣೆ ಪೊಲೀಸರು ಇದೀಗ ಆರೋಪಿಯನ್ನು ಬಂಧಿಸಿ ಸುಮಾರು 18,34,000 ರೂ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡಿದಿದ್ದಾರೆ.
ಮುಸಬ್ಬಿರ ಗದಗಕರ (ವಯಸ್ಸು 20 ವರ್ಷ) ಆರೋಪಿ ಆಗಿದ್ದು, ಸಿಸಿಟಿವಿ ದೃಶ್ಯಗಳನ್ನು ಗಮನಿಸಿದ ಪೊಲೀಸರು ಇವನ ಅನುಮಾನಾಸ್ಪದ ರೀತಿಯ ಚಲನ ವಲನಗಳನ್ನು ಗಮನಿಸಿ ಈತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಾನು ಮಾಡಿದ ಕಳ್ಳತನವನ್ನು ಒಪ್ಪಿಕೊಂಡಿದ್ದಾನೆ.
ಈ ಪ್ರಕರಣವನ್ನು ಎ.ಸಿ.ಪಿ (ದಕ್ಷಿಣ) ಉಪ ವಿಭಾಗ ಹುಬ್ಬಳ್ಳಿರವರ ನೇತೃತ್ವದ ತಂಡವು ಕಸಬಾಪೇಟೆ ಪೊಲೀಸ ಠಾಣೆಯ ಇನ್ಸಪೆಕ್ಟರ ರಾಘವೇಂದ್ರ ಹೆಚ್. ಹಳ್ಳೂರ, ಎ.ಎಸ್.ಐ ಸಿ ಎಸ್ ಅಂಗಡಿಯವರ ಹಾಗೂ ಸಿಬ್ಬಂದಿಯರಾದ ಐ. ಕೆ. ಧಾರವಾಡ, ಬಿ. ಎಫ್. ಬೆಳಗಾವ, ಎಲ್ ವಾಯ್ ಪಾಟೀಲ, ಆರ್. ಎಸ್. ರಾಠೋಡ, ಹೆಚ್.ಆರ್ ರಾಮಾಪುರ , ಹೆಚ್, ಬ್ಯಾಡಗಿ ಹಾಗೂ ಪಾಲಯ್ಯ ಎನ್, ತಂಡವು ಪ್ರಕರಣವನ್ನು ಪತ್ತೆ ಹಚ್ಚಿದ್ದಾರೆ.