
ಧಾರವಾಡ
ಬಸ್ ನಿಲ್ದಾಣದಲ್ಲಿ ಬ್ಯಾಗ್ ಕಳ್ಳತನನ ಮಾಡುತ್ತಿದ್ದ ಆರೋಪಿ ಗುನಾ ಮೀನಾಚಿ ಸಕ್ತಿ ಹಾಗೂ ಮನೆಗಳ್ಳತನ ಮಾಡುತ್ತಿದ್ದ ಕಾಮೇಪಲ್ಲಿ ಶ್ರೀನಿವಾಸ ಎಂಬ ಇಬ್ಬರು ಆರೋಪಿಗಳನ್ನು ಬಂಧನ ಮಾಡುವಲ್ಲಿ ಧಾರವಾಡದ ಉಪನಗರ ಪೊಲೀಸರು ಯಶಸ್ವಿಯಾಗಿದ್ದಾರೆ.
ಸದರಿ ದ ಕಳ್ಳತನವಾಗಿದ್ದ 9.25 ಲಕ್ಷ ರೂ ಮೌಲ್ಯದ 100 ಗ್ರಾಂ ತೂಕದ ಬಂಗಾರದ ಆಭರಣ ಮತ್ತು 750 ಗ್ರಾಂ ತೂಕದ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಕಳ್ಳತನನ ಮಾಡುತ್ತಿದ್ದ ಗುನಾ ಮೀನಾಚಿ ಸಕ್ತಿ, ತಮಿಳುನಾಡಿನ ತಿರುಚನಪಲ್ಲಿಯ ಮೂಲದವಳು ಆಗಿದ್ದು,ಆರೋಪಿ ಕಾಮೇಪಲ್ಲಿ ಶ್ರೀನಿವಾಸ ಆಂಧ್ರಪ್ರದೇಶದ ಗೋದಾವರಿ ಜಿಲ್ಲೆಯವನಾಗಿದ್ದಾನೆ.
ಇವರಿಬ್ಬರನ್ನು ಧಾರವಾಡ ಉಪನಗರ ಪೊಲೀಸ್ ಮತ್ತು ತಂಡ ಈಗ ಕಂಬಿ ಹಿಂದೆ ತಳ್ಳಿದ್ದಾರೆ.