
ಪಬ್ಲಿಕ್ ರೈಡ್ ಬೆಳಗಾವಿ,ಹುಕ್ಕೇರಿ
ಕಣಗಲಾ ಬಿಜಾಪುರ ಹಾದಿಯಲ್ಲಿರುವ ನಿವಾಸಿಗಳ ಮತ್ತು ರೈತರ ಬಹು ವರ್ಷಗಳಿಂದ ಇರುವ ಬೇಡಿಕೆ. ಕಣಗಲಾ ಬಿಜಾಪುರ ತೋಟಕ್ಕೆ ಹೊಲ ಗದ್ದೆಗಳಿಗೆ ಹೋಗುವ ರಸ್ತೆ ಮಾಡುವ ಕುರಿತು ಬಹು ವರ್ಷಗಳಿಂದ ಬೇಡಿಕೆ ಇತ್ತು ಈ ಬೇಡಿಕೆ ಈಗ ಇಡೇರಿಕೆಯಾಗುವ ಸನಿಹಿತ ಗುರುವಾರ ಮಾರ್ಚ್ ೨೭-೨೦೨೫ ರಂದು ಹುಕ್ಕೇರಿ ಮತಕ್ಷೇತ್ರದ ಶಾಸಕರು ನಿಖಿಲ್ ಕತ್ತಿ ಇವರ ಪ್ರಯತ್ನದಿಂದ ಡಿಸಿಸಿ ಬ್ಯಾಂಕ್ ನ ನಿರ್ದೇಶಕರು ಮಾಜಿ ಸಂಸದರು ರಮೇಶ ಕತ್ತಿ ಇವರ ಉಪಸ್ಥಿತಿಯಲ್ಲಿ ಗುದ್ದಲ್ಲಿ ಪೂಜೆ ಮಾಡುವ ಮೂಲಕ ಕಣಗಲಾ-ಬಿಜಾಪುರ ಹೊಲ ಗದ್ದೆಗೆ ಹೋಗುವಂತಹ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಯಿತು.
ಈ ಒಂದು ಚಾಲನೆಗೆ ಗ್ರಾಮ ಪಂಚಾಯಿತಿ ಅಧ್ಯಕ್ಷರು ತಸ್ವಿನ ಬಾನು ಮುಲ್ಲಾ ಉಪಸ್ಥಿತರಿದ್ದರು. ಹಾಗೇ ಉಪಸ್ಥಿತಿ ಅಶೋಕ ಹೀರೆಕೋಡಿ ಪಿ.ಕೆ.ಪಿ.ಎಸ್ ಅಧ್ಯಕ್ಷರು ಮತ್ತು ಗ್ರಾಮ ಪಂಚಾಯಿತಿ ಸದಸ್ಯರು ಸಂತೋಷ ಹೊಸುರೆ, ಮಧುಕರ ಹತ್ರೊಟೆ ,ಮಲ್ಲೇಶ ಕಿವುಡೆ, ಹನಮಂತ ಗಜಬರೆ, ರಾಹು ಸಾಹೇಬ ಕೋರೆ, ಶಂಕರ ಶಿಂಧೆ, ಜಾನಬಾ ಶಿಂಧೆ, ವೆಂಕಟೇಶ ಪೂಜಾರಿ, ಲಕ್ಷ್ಮಣ ಒಡೆಯರ, ರಾಯಗೌಡಾ ತೋಟಕರ, ಉಮೇಶ ಕೋರೆ, ಶಿವಣ್ಣಾ ತೋಟಕರ, ಡಾ.ಬಾಲಕೃಷ್ಣಾ ಶಿಂಧೆ, ಜ್ಯೋತಿಬಾ ಪಾಟೀಲ, ವಿಜಯ ಪರೇಟ, ರಾಜು ಶಿಂಧೆ, ಮಲ್ಲಪ್ಪ ಅಣ್ಣಾ ಬಿಸಿರೊಟ್ಟಿ, ಚಂದ್ರಕಾಂತ ಹವಾಲ್ದಾರ, ಗ್ರಾಮ ಪಂಚಾಯಿತಿ ಸದಸ್ಯರು, ರೈತರು, ಗ್ರಾಮಸ್ತರು, ಉಪಸ್ಥಿತಿರಿದ್ದರು
ವರದಿಗಾರರು ಸಂತೋಷ ನಿರ್ಮಲೆ ಪಬ್ಲಿಕ್ ರೈಡ್ ಬೆಳಗಾವಿ