
ಧಾರವಾಡ
ಇತ್ತೀಚಿನ ದಿನಗಳಲ್ಲಿ ಧಾರವಾಡ ಟೋಲ ನಾಕಾ ವೃತ ಅಪಘಾತಗಳ ಹಾಟ್ ಸ್ಪಾಟ್ ಆಗುತ್ತಿದ್ದೇಯಾ ಎಂಬ ಅನುಮಾನುಗಳ ಧಾರವಾಡ ಜನತೆ ಮನಸ್ಸಿನಲ್ಲಿ ಮೂಡುತ್ತಿದ್ದು, ಇದಕ್ಕೆ ನಿದರ್ಶನ ಎಂಬತೆ ಶನಿವಾರ ರಾತ್ರಿ ಟೋಲ ನಾಕಾ ವೃತಕ್ಕೆ ಬರುತ್ತಿದ್ದ ಬೈಕ್ ಸವಾರನೊಬ್ಬ ನಿಯಂತ್ರಣ ತಪ್ಪಿ ಬಿದ್ದ ಗಂಭೀರವಾಗಿ ಗಾಯಗೊಂಡ ಘಟನೆ ತಡ ರಾತ್ರಿ ನಡೆದಿದೆ.
ಹೌದು ಇತ್ತೀಚೆಗೆ ಧಾರವಾಡ ಟೋಲ್ ನಾಕಾ ಬಳಿಯಲ್ಲಿ ಒಂಮದ ಹೊಂದೆಯೊಂದು ಅಪಘಾತಗಳು ನಡೆಯುತ್ತಲೇ ಇದ್ದು, ಇಲ್ಲಿನ ಅಪಘಾತಗಳ ಘಟನೆ ನೋಡುತ್ತಿರುವ ಜನತೆಗೆ ಇದೊಂದು ಅಪಘಾತಗಳ. ಹಾಟ್ ಸ್ಪಾಟ್ ಎಂದು ನೋಡುವಂತಾಗಿದೆ. ಇತ್ತೀಚೆಗಷ್ಟೇ ಬಿಆರ್‌ಟಿಎಸ್ ಗ್ರೀಲ್‌ಗೆ ರಸ್ತೆ ಸೂಚನಾ ಫಲಕ ಕಾಣದೇ ಇನೋವಾ ಕಾರ್ವೊಂದು ಡಿಕ್ಕಿಯಾಗಿತ್ತು.
ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಾಗಿರಲಿಲ್ಲ. ಧಾರವಾಡ ಕಲಘಟಗಿ ರಸ್ತೆ ಸಿಸಿ ಕಾಮಗಾರಿ ಕೆಲಸ ನಡೆಯುತ್ತಿದ್ದು, ಇದೇ ರಸ್ತೆಯ ಮಾರ್ಗವಾಗಿ ಟೋಲ್ ನಾಕಾ ವೃತಕ್ಕೆ ಬರುತ್ತಿದ್ದ ಬೈಕ ಸವಾರ ನಿಯಂತ್ರಣ ತಪ್ಪಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾನೆ. ಇನ್ನೂ ಘಟನೆ ನಡೆಯುತ್ತಿದಂತೆ ಸ್ಥಳೀಯರು ಬೈಕ್ ಸವಾರನನ್ನು ರಕ್ಷಿಸಿ ಆಸ್ಪತ್ರೆಗೆ ರವಾನಿಸಿದ್ದಾರೆ. ಧಾರವಾಡ ಸಂಚಾರಿ ಪೊಲೀಸ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಗಾಯಾಳು ಬೈಕ್ ಸವಾರ ಹೆಸರು ಪೊಲೀಸರ ಪ್ರಾಥಮಿಕ ತನಿಖೆಯ ನಂತರವಷ್ಟೇ ತಿಳಿದು ಬರಬೇಕಿದೆ.