
ಪಬ್ಲಿಕ್ ರೈಡ್ ನ್ಯೂಸ್ ಪೀಣ್ಯ ದಾಸರಹಳ್ಳಿ ಸಮೀಪದ ದಾಸರಹಳ್ಳಿಯ ನೆಲೆ ಮಹೇಶ್ವರಮ್ಮ ದೇವಸ್ಥಾನದ ಆವರಣದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಬೆಂಗಳೂರು ಘಟಕ, ವೀರಶೈವ- ಲಿಂಗಾಯಿತ ಕ್ಷೇಮಾಭಿವೃದ್ಧಿ ವೇದಿಕೆ ದಾಸರಹಳ್ಳಿ ಕ್ಷೇತ್ರ, ಅಖಿಲ ಭಾರತ ವೀರಶೈವ- ಲಿಂಗಾಯತ ಮಹಾಸಭಾ, ಕಾಯಕಯೋಗಿ ಸಹಕಾರ ಸಂಘ ನಿಯಮಿತ ಮತ್ತು ಅಕ್ಕಮಹಾದೇವಿ ಮಹಿಳಾ ಸಂಘದ ವತಿಯಿಂದ ಶ್ರೀ ಶಿವಕುಮಾರ ಸ್ವಾಮೀಜಿ ಅವರ 118ನೇ ಜನ್ಮದಿನೋತ್ಸವದ ಪ್ರಯುಕ್ತ ವಚನಾಮೃತ ಮತ್ತು ಆಧ್ಯಾತ್ಮಿಕ ಪ್ರವಚನ ವಚನ ಗೀತೆ, ಭಕ್ತಿ ಗೀತೆಯನ್ನು ರಾಯಚೂರು ಜಿಲ್ಲೆ ಮಹಾಂತೇಶ್ವರ ಮಠದ ಮಹಾಂತ ಮಹಾಸ್ವಾಮೀಜಿ ನಡೆಸಿಕೊಟ್ಟರು. ವೀರಶೈವ ಮುಖಂಡರಾದ ಎಂ.ಎಚ್. ಪಾಟೀಲ್ ಭಾಗವಹಿಸಿದರು.
1000 ಜನರಿಗೆ ಅನ್ನ ದಾಸೋಹವನ್ನು ಏರ್ಪಡಿಸಲಾಗಿತ್ತು. ವೇದಿಕೆಯ ಅಧ್ಯಕ್ಷ ಬಸವರಾಜಣ್ಣ, ಜಯದೇವ್, ಎಂ. ಬಸವರಾಜು, ಎಂ.ಎಚ್. ಪಾಟೀಲ್ ಮುಂತಾದವರಿದ್ದರು.