
ಪಬ್ಲಿಕ್ ರೈಡ್ ಹುಬ್ಬಳ್ಳಿ
ನಗರದಲ್ಲಿಂದು ಮಾತನಾಡಿದ ಅವರು ಡಿಕೆ ಶಿವಕುಮಾರ್ ಸಿಎಂ ರೇಸ್’ನಲ್ಲಿ ಮುಂಚೆ ಇಂದ ರೇಸ್ ನಲ್ಲಿದಾರೆ ಅದರಲ್ಲಿ ಪ್ರಶ್ನೆ ಇಲ್ಲ, ಇದಕ್ಕೆಲ್ಲ ವರಿಷ್ಠರ ನಿರ್ಧಾರ ತಗೊಬೇಕು. ಸಮಯಕ್ಕಾಗಿ ಕಾಯಬೇಕು, ಕಾದು ನೋಡೋಣ. ಗ್ಯಾರಂಟಿಗಳ ನಗದು ಫಲಾನುಭವಿಗಳಿಗೆ ಬರದಿರುವ ವಿಚಾರವಾಗಿ ಪ್ರತಿಕ್ರೆಯಿಸಿ, ನಮ್ಮ ಗ್ಯಾರಂಟಿ ನಿಲ್ಲಿಸಿಲ್ಲ ಆದರೆ ನಾವ ಇದೇ ದಿನ ಕೊಡ್ತೀವಿ ಅಂತಿಲ್ಲ. ಕೆಲಸಲ ಲೇಟ್ ಆಗಿರಬಹುದು.
ಸರ್ಕಾರ ಅನ್ನೋದು ಸಮುದ್ರ ತರಹ ಕೆಲ ಸಲ ಎರಡು ತಿಂಗಳು ಸೇರಿ ಕೊಡಬಹುದು ಆದ್ರೆ ನಾವ ಯಾವ ಗ್ಯಾರಂಟಿನೂ ನಿಲ್ಲಿಸಿಲ್ಲ ಎಂದರು. ಇನ್ನೂ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಚರ್ಚೆ ವಿಚಾರವಾಗಿ ಮಾತನಾಡಿ, ಯಾವಾಗ ಮಾಡ್ತಾರೆ ಅನ್ನೋದನ್ನ ಕಾದು ನೋಡೋಣ. ಕೆಪಿಸಿಸಿ ಅಧ್ಯಕ್ಷರನ್ನ ನೇಮಿಸುವ ಅಧಿಕಾರ ನಮಗಿಲ್ಲ, ಅದನ್ನ ಹೈಕಮಾಂಡ್ ನೋಡುತ್ತೆ. ಈ ಬಗ್ಗೆ ಯಾವುದೇ ಪ್ರಸ್ತಾಪ ಆಗಿಲ್ಲ, ಚರ್ಚೆ ಆಗಿಲ್ಲ, ಸಮಯ ಬಂದಾಗ ನೋಡೋಣ. ಕರ್ನಾಟಕದಲ್ಲಿ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಆಗುತ್ತೆ .
ಈ ಬಗ್ಗೆ ಎಐಸಿಸಿ ಅಧ್ಯಕ್ಷ ಖರ್ಗೆ ಅವರೇ ಹೇಳಿದ್ದಾರೆ. ದೇಶದ ನಾನಾ ರಾಜ್ಯಗಳ ಪಿಸಿಸಿ ಅಧ್ಯಕ್ಷರ ಬದಲಾವಣೆ ಆಗುತ್ತಿದೆ, ಈಗ ತಕ್ಷಣ ಮಾಡಲು ಆಗದೆ ಇರಬಹುದು, ಆದ್ರೆ ಆಗೇ ಆಗುತ್ತೆ. ಅವರು ಯಾವಾಗ ಮಾಡ್ತಾರೆ ಅನ್ನೋದನ್ನ ಕಾದು ನೋಡೋಣ. ನಾನಂತೂ ಯಾವುದೇ ರೀತಿಯ ಆಕಾಂಕ್ಷೆ ಅಲ್ಲಾ, ಸಂಧರ್ಭ ಬಂದಾಗ ನೋಡೋಣ. ನಾನು ಅಧ್ಯಕ್ಷ ಆಗಬೇಕು ಅಂತ ನನ್ನ ಹಿಂಬಾಲಕರು ಪ್ರಮುಖರು ಇಂಗಿತ ವ್ಯಕ್ತಪಡಿಸಿದ್ದಾರೆ ಇದು ಸಹಜ ಕೂಡಾ ಎಂದು ಉತ್ತರಿಸಿದ್ದಾರೆ. ಮುಡಾ ಪ್ರಕರಣದಲ್ಲಿ ಸಿಎಂರನ್ನು ಇಡಿ ಇಕ್ಕಳಲ್ಲಿ ಸಿಗಿಸಲು ಹುನ್ನಾರ ವಿಚಾರಕ್ಕೆ ಮಾತನಾಡಿ, ಬಿಜೆಪಿ ಕೈಯಲ್ಲಿ ಏನು ಇಲ್ಲಾ, ಇಡಿ ಒಂದು ಎಜೇನ್ಸಿ
ಇದಕ್ಕೆ ಸಾಕ್ಷಾಧಾರಗಳು ಇಲ್ಲ ಆದರೆ ನಾವು ಮುಡಾ ಪ್ರಕರಣದಲ್ಲಿ ಇಡೀ ದುರುಪಯೋಗ ಅಂತ ಹೇಳೋಕೆ ಆಗಲ್ಲ. 14 ಸೈಟ್ ಗಳ ಬಗ್ಗೆನೇ ಹೆಚ್ಚಿನ ವಿಷಯ ಪ್ರಸ್ತಾಪ ಮಾಡ್ತಿರೋದೇ ರಾಜಕೀಯ. ಇದೆ ರೀತಿ 2000 ಸೈಟ್ ಗಳು ಹಂಚಿಕೆ ಆಗಿವೆ, ಆ ಬಗ್ಗೆ ಯಾಕೆ ಚರ್ಚೆ ಆಗ್ತಿಲ್ಲ . ಸಿಎಂ ಅವರ ಪ್ರಕರಣ ಬೆಳಕಿಗೆ ಬಂದ ನಂತರ ಇದು ರಾಜಕೀಯ ಅಂತ ನಾವೇ ಹೇಳಿದ್ವಿ ಎಂದರು.